ದೇಶ

ಕಳೆದ 4 ವರ್ಷಗಳಲ್ಲಿ ಉಗ್ರರಿಂದ ಅಸ್ಸಾಂ ನ 319 ನಾಗರಿಕರ ಹತ್ಯೆ

ಅಸ್ಸಾಂ ನಲ್ಲಿ ಕಳೆದ 4 ವರ್ಷಗಳಲ್ಲಿ ನಡೆದ ಬಂಡಾಯ ವಿರೋಧಿ ಕಾರ್ಯಾಚರಣೆಯಲ್ಲಿ 319 ನಾಗರಿಕರು 336 ಉಗ್ರರು ಮೃತಪಟ್ಟಿದ್ದಾರೆ

ಕಳೆದ 4 ವರ್ಷಗಳಲ್ಲಿ ಉಗ್ರರಿಂದ ಅಸ್ಸಾಂ ನ 319 ನಾಗರಿಕರ ಹತ್ಯೆ
ಉಗ್ರರು (ಸಂಗ್ರಹ ಚಿತ್ರ)
Published On :

ಗುವಾಹಟಿ: ಅಸ್ಸಾಂ ನಲ್ಲಿ ಕಳೆದ 4 ವರ್ಷಗಳಲ್ಲಿ ನಡೆದ ಬಂಡುಕೋರ ವಿರುದ್ಧದ ಕಾರ್ಯಾಚರಣೆಯಲ್ಲಿ 319 ನಾಗರಿಕರು 336 ಉಗ್ರರು ಮೃತಪಟ್ಟಿದ್ದಾರೆ ಎಂದು ಅಸ್ಸಾಂ ನ ಸಚಿವ ರಾಕಿಬುಲ್ ಹುಸೇನ್ ವಿಧಾನಸಭೆಗೆ ತಿಳಿಸಿದ್ದಾರೆ.
ಕಳೆದ ಡಿಸೆಂಬರ್ 23 ರಂದು ನಡೆದ ಎನ್.ಡಿ.ಎಫ್.ಬಿ ದಂಗೆಯ ವೇಳೆ 15 ಬಂಡುಕೋರರನ್ನು ಪೊಲೀಸರು ಹತ್ಯೆ ಮಾಡಿ ಜುಲೈ 31 ರ ವರೆಗೆ 448 ಜನರನ್ನು ಬಂಧಿಸಿದ್ದರು ಎಂದು ಸಚಿವ ಹುಸೇನ್ ಮಾಹಿತಿ ನೀಡಿದ್ದಾರೆ. ಅಸ್ಸಾಂ ನಲ್ಲಿ ಒಟ್ಟು 8 ಉಗ್ರ ಸಂಘಟನೆಗಳಿದ್ದು 11 ಭೂಗತ ಸಂಘಟನೆಗಳು ಸರ್ಕಾರದೊಂದಿಗೆ ಶಾಂತಿಯುತ ಮಾತುಕತೆ ನಡೆಸಲು ಸಿದ್ಧವಿದೆ.     
ವಿಧಾನಸಭೆಯಲ್ಲಿ ಎಜಿಪಿ ಸದಸ್ಯ ಕೆಸಬ್ ಮಹಂತ ಕೇಳಿದ ಪ್ರಶ್ನೆಗೆ ಸಿ.ಎಂ ತರುಣ್ ಗೊಗೊಯ್ ಪರವಾಗಿ ಉತ್ತರಿಸಿದ ಸಚಿವ ಹುಸೇನ್, ಕಳೆದ ನಾಲ್ಕುವರೆ ವರ್ಷದಲ್ಲಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 6 ,098 ಜನರನ್ನು ಹತ್ಯೆ ಮಾಡಲಾಗಿದ್ದು 8164 ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ತಿಳಿಸಿದ್ದಾರೆ. ಸಚಿವರು ನೀಡಿರುವ ಮಾಹಿತಿ ಪ್ರಕಾರ ಅಸ್ಸಾಂ ನಲ್ಲಿ ಒಟ್ಟು 346  ಪೊಲೀಸ್ ಠಾಣೆಗಳಿದ್ದು, 60,244 ಪೊಲೀಸ್ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. 15259 ಹುದ್ದೆಗಳು ಖಾಲಿ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.