ಅಯೋಧ್ಯೆ ರಾಮಮಂದಿರ ದುರಸ್ತಿಗೆ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್

ಅಯೋಧ್ಯೆಯ ರಾಮ ಮಂದಿರದ ಹೊದಿಕೆ ದುರಸ್ತಿ ಮಾಡಿ, ಭಕ್ತಾದಿಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕೆಂದು ಸುಪ್ರೀಂ ಕೋರ್ಟ್ ಸರಕಾರಕ್ಕೆ ಸೋಮವಾರ ಸೂಚಿಸಿದೆ...
ರಾಮಮಂದಿರ
ರಾಮಮಂದಿರ
Updated on: 
ನವದೆಹಲಿ: ಅಯೋಧ್ಯೆಯ ರಾಮ ಮಂದಿರದ ಹೊದಿಕೆ ದುರಸ್ತಿ ಮಾಡಿ, ಭಕ್ತಾದಿಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕೆಂದು ಸುಪ್ರೀಂ ಕೋರ್ಟ್ ಸರಕಾರಕ್ಕೆ ಸೋಮವಾರ ಸೂಚಿಸಿದೆ. 
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಎ.ಆರ್ ದವೆ ಹಾಗೂ ಕುರಿಯನ್ ಜೋಸೆಫ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಉತ್ತರಪ್ರದೇಶದ ಫೈಜಾಬಾದ್‌ನ ಜಿಲ್ಲಾಧಿಕಾರಿ ಹಾಗೂ ಇಬ್ಬರು ಸ್ವತಂತ್ರ ವೀಕ್ಷಕರ ಉಸ್ತುವಾರಿಯಲ್ಲಿ ದುರಸ್ತಿ ಹಾಗೂ ಮೂಲಸೌಕರ್ಯ ಕಲ್ಪಿಸುವ ಕೆಲಸಗಳು ನಡೆಯಲಿ ಎಂದು ನಿರ್ದೇಶಿಸಿದೆ.
ಅಯೋಧ್ಯೆಗೆ ಭೇಟಿ ನೀಡುವ ಭಕ್ತರಿಗೆ ಮೂಲಸೌಕರ್ಯಗಳನ್ನು ರಾಜ್ಯ ಹಾಗೂ ಕೇಂದ್ರ ಸರಕಾರಗಳು ಒದಗಿಸಿಲ್ಲ. ದೇಗುಲದ ನಿರ್ಮಾಣ ಕೈಗೊಳ್ಳಬಾರದೇ ಹೊರತು, ಮೂಲಸೌಕರ್ಯ ಒದಗಿಸಲು ಏನು ತೊಂದರೆ ಎಂದು ಪ್ರಶ್ನಿಸಿ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅರ್ಜಿ ಸಲ್ಲಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com