

ಮುಂಬೈ: ವಿವಾದಿತ ದೇವ ಮಹಿಳೆ ರಾಧಾ ಮಾಳನ್ನು ಬುಧವಾರ ಮುಂಬೈಯ ಖಾಂದೀವಲಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೊಳಪಡಿಸಲಾಗಿದೆ. ವಿಚಾರಣೆ ವೇಳೆ ರಾಧೆ ಮಾ ಅವರು ಡ್ಯಾಡಿ ಎಂದು ಕರೆಯಲ್ಪಡುವ ವ್ಯಕ್ತಿಯೊಂದಿಗೆ ವಿವಾಹವಾಗಿದ್ದಾರೆ ಎಂಬ ವಿಷಯ ಬಹಿರಂಗವಾಗಿದೆ.
ತಾನು ಮದುವೆಯಾಗಿದ್ದು, ತನಗೆ ಮೂರು ಮಕ್ಕಳು ಹಾಗೂ ಮೊಮ್ಮಕ್ಕಳು ಇದ್ದಾರೆ ಎಂದು ರಾಧೆ ಮಾ ಹೇಳಿದ್ದಳು. ಆದರೆ ಆಕೆಯ ಪತಿ ಯಾರು ಎಂಬುದರ ಬಗ್ಗೆ ಇನ್ನೂ ಸಂದೇಹವಿದೆ.
ವಿಚಾರಣೆಯ ವೇಳೆ ಆಕೆಯ ಆಸ್ತಿ ಬಗ್ಗೆ ಪ್ರಶ್ನೆ ಕೇಳಿದಾಗ ತನ್ನ ಹೆಸರಲ್ಲಿ ಯಾವ ಆಸ್ತಿಯೂ ಇಲ್ಲ ಎಂದು ಹೇಳಿದಾಕೆ, ಇಲ್ಲಿಯವರೆಗೆ ಪಾಸ್‌ಪೋರ್ಟ್ ವಿವರಗಳನ್ನು ಪೊಲೀಸರಿಗೆ ಹೇಳಿಲ್ಲ,
ಆದರೆ ಡ್ಯಾಡಿ ಎಂಬ ಚಾರ್ಟೆಡ್ ಅಕೌಂಟೆಟ್ ಈಕೆಯ ನಿಕಟವರ್ತಿಯಾಗಿದ್ದು, ಆತ ಯಾರು? ಆತನೇ ಇವಳ ಪತಿಯೆ? ಎಂಬುದರ ಬಗ್ಗೆ ಪೊಲೀಸರಿಗೆ ಇನ್ನೂ ಉತ್ತರ ಸಿಕ್ಕಿಲ್ಲ.