

ಜೈಪುರ: ರಾಜಸ್ಥಾನದ ಆ್ಯಂಬ್ಯುಲೆನ್ಸ್ ಸೇವೆ ಹಗರಣ ಸಂಬಂಧ ಸಿಬಿಐ ಶುಕ್ರವಾರ ಕಾಂಗ್ರೆಸ್ ಮುಖಂಡರಾದ ಸಚಿನ್ ಪೈಲಟ್ ಮತ್ತು ಅಶೋಕ್ ಗೆಹ್ಲೋಟ್ ಸೇರಿ ಹಲವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದೆ.
ಗೆಹ್ಲೋಟ್ ಸಿಎಂ ಆಗಿದ್ದಾಗ ಝಿಕಿತ್ಝಾ ಕಂಪನಿಯನ್ನು ಗ್ರಾಮೀಣದಲ್ಲಿ ಆ್ಯಂಬ್ಯುಲೆನ್ಸ್ ಸೇವೆ ಒದಗಿಸಲು ಆಯ್ಕೆ ಮಾಡಲಾಗಿತ್ತು. ಈ ಕಂಪನಿ ಆಗ ಕೇಂದ್ರ ಸಚಿವರಾಗಿದ್ದ ವಲಯಾರ್ ರವಿ ನಡೆಸುತ್ತಿದ್ದರು. ವಿತ್ತ ಸಚಿವ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಇದರ ನಿರ್ದೇಶಕರಾಗಿದ್ದರು. ಸಿವಿಸಿ ಪ್ರಕಾರ ಈ ಕಂಪನಿ ಕೇವಲ ಕಾಗದದಲ್ಲಷ್ಟೇ ಅಸ್ತಿತ್ವದಲ್ಲಿತ್ತು. ಈ ಮೂಲಕ ರು.10 ಕೋಟಿ ಅವ್ಯವಹಾರ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ವಸುಂಧರಾ ಈ ಹಗರಣವನ್ನು ಸಿಬಿಐ ತನಿಖೆಗೆ ವಹಿಸಿದ್ದರು.