ಡಿಡಿಯಿಂದ ಸಂಸ್ಕೃತ ಟ್ವಿಟರ್

ಸಂಸ್ಕೃತ ದಿನಾಚರಣೆಯ ಅಂಗವಾಗಿ ದೂರದರ್ಶನ ವಾಹಿನಿ ಶನಿವಾರ ಆ ಭಾಷೆಯ ಫೇಸ್‍ಬುಕ್ ಹಾಗೂ ಟ್ವಿಟರ್ ಖಾತೆ ಆರಂಭಿಸಿದೆ...
ದೂರದರ್ಶನ (ಸಂಗ್ರಹ ಚಿತ್ರ)
ದೂರದರ್ಶನ (ಸಂಗ್ರಹ ಚಿತ್ರ)
Updated on: 

ನವದೆಹಲಿ: ಸಂಸ್ಕೃತ ದಿನಾಚರಣೆಯ ಅಂಗವಾಗಿ ದೂರದರ್ಶನ ವಾಹಿನಿ ಶನಿವಾರ ಆ ಭಾಷೆಯ ಫೇಸ್‍ಬುಕ್ ಹಾಗೂ ಟ್ವಿಟರ್ ಖಾತೆ ಆರಂಭಿಸಿದೆ.

ಸಂಸ್ಕೃತ ಬಳಸುವಂತಹ ವೀಕ್ಷಕರಿಗಾಗಿ ತಾಜಾ ಸುದ್ದಿಗಳು ಮತ್ತು ಮಾಹಿತಿಗಳನ್ನು ಅಪ್ ಡೇಟ್ ಮಾಡುವ ಉದ್ದೇಶದಿಂದ ಈ ಜಾಲತಾಣಗಳಲ್ಲಿ ಖಾತೆ ತೆರೆದಿರುವುದಾಗಿ ದೂರದರ್ಶನದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಸಂಸ್ಕೃತ ದಿನದ ಹಿನ್ನೆಲೆಯಲ್ಲಿ ನಾವು ವಿಶೇಷ ಕೊಡುಗೆಯಾಗಿ ಫೇಸ್‍ಬುಕ್ ಮತ್ತು ಟ್ವಿಟರ್ ಜಾಲತಾಣಗಳಲ್ಲಿ ಖಾತೆ ಆರಂಭಿಸಿದ್ದು, ಈ ಹಿಂದೆ ವೀಕ್ಷಕರ ಒತ್ತಾಯದ ಮೇರೆಗೆ ವಾರಾಂತ್ಯದ ಸಂಸ್ಕೃತ ಕಾರ್ಯಕ್ರಮ ಪ್ರಸಾರ ಆರಂಭಿಸಲಾಗಿತ್ತು ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com