ಸೂರತ್‍ನಲ್ಲಿ ಇಂದು 2ನೇ ಸುತ್ತಿನ ಮೀಸಲು ರ್ಯಾಲಿ

ಮೀಸಲಾತಿಗಾಗಿ ಗುಜರಾತ್‍ನಲ್ಲಿ ಬೃಹತ್ ರ್ಯಾಲಿ ನಡೆಸಿ ದೇಶದ ಗಮನ ಸೆಳೆದ ಪಟೇಲ್ ಸಮುದಾಯ ಈಗ ಮತ್ತೊಂದು...
ಹಾರ್ದಿಕ್ ಪಟೇಲ್
ಹಾರ್ದಿಕ್ ಪಟೇಲ್
Updated on: 

ಅಹಮದಾಬಾದ್: ಮೀಸಲಾತಿಗಾಗಿ ಗುಜರಾತ್‍ನಲ್ಲಿ ಬೃಹತ್ ರ್ಯಾಲಿ ನಡೆಸಿ ದೇಶದ ಗಮನ ಸೆಳೆದ ಪಟೇಲ್ ಸಮುದಾಯ ಈಗ ಮತ್ತೊಂದು ಸುತ್ತಿನ ಪ್ರತಿಭಟನೆಗೆ ಸಿದ್ಧವಾಗಿದೆ. ಸೋಮವಾರ ಮಾತನಾಡಿದ ಪಟೇಲ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್, ಮಂಗಳವಾರ ಸೂರತ್‍ನಲ್ಲಿ 2ನೇ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಮೀಸಲಿಗಾಗಿ ನಡೆಸುತ್ತಿರುವ ಪ್ರತಿಭಟನೆಗೆ ಹಲವು ಸಮುದಾಯಗಳು ಬೆಂಬಲ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ದೇಶದ ಇತರೆ ಭಾಗಗಳಲ್ಲೂ ರ್ಯಾಲಿಗಳನ್ನು ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ನಾವು ಮೀಸಲಿಗೆ ಆಗ್ರಹಿಸಿ ನಮ್ಮ ಸಮುದಾಯದ 27 ಕೋಟಿ ಸದಸ್ಯರಿಂದ ಸಹಿ ಸಂಗ್ರಹಿಸಿ, ಅದನ್ನು ಪ್ರಧಾನಿ ಮೋದಿ ಅವರಿಗೆ ಕಳುಹಿಸಲಿದ್ದೇವೆ ಎಂದೂ ಹೇಳಿದ್ದಾರೆ.

ಅರ್ಜಿ ವಜಾ: ಇದೇ ವೇಳೆ, ಪಟೇಲ್ ಸಮುದಾಯದ ವ್ಯಕ್ತಿಯ ಲಾಕಪ್ ಡೆತ್ ಪ್ರಕರಣದ ತನಿಖೆಯ ಮೇಲ್ವಿಚಾರಣೆ ಯನ್ನು ನ್ಯಾಯಾಲಯವೇ ನೋಡಬೇಕು ಎಂದು ಕೋರಿ ಸಲ್ಲಿಸಲಾಗಿ ದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ವಜಾ ಮಾಡಿದೆ. ಪ್ರಕರಣದ ತನಿಖೆಯನ್ನು ಸಿಐಡಿ ಆರಂಭಿಸಿರುವಾಗ, ನಾವು ಮೇಲ್ವಿಚಾರಣೆ ನಡೆಸಬೇಕಾದ ಅಗತ್ಯವಿಲ್ಲ ಎಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com