ನರೇಂದ್ರ ಮೋದಿಯವರು ಪ್ರಧಾನಿಯಾಗುವ ಮುನ್ನ ಬೇರೆ ರೀತಿಯ ವ್ಯಕ್ತಿಯಾಗಿದ್ದರು. ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ಮೋದಿ, ಪ್ರಧಾನಿಯಾದ ಮೇಲೆ ಚತುರ ರಾಜಕಾರಣ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಹಾರದ ಗಾಂಧಿ ಮೈದಾನದಲ್ಲಿ ಬಾಂಬ್ ಸ್ಫೋಟವಾಗಿತ್ತು. ಆದರೆ ಮೋದಿಯವರು ಬಾಂಬ್ ಸ್ಫೋಟದಲ್ಲಿ 6 ಮಂದಿ ಸಾವನ್ನಪ್ಪಿದ್ದರೂ, ಅಲ್ಲಿ ಏನೂ ಆಗಲೇ ಇಲ್ಲ ಎಂಬಂತೆ ಸಮಾಧಾನಕರವಾಗಿ ಭಾಷಣ ಮುಂದುವರಿಸಿದ್ದರು.