ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ವಿರುದ್ಧ ಲೈಂಗಿಕ ಆರೋಪ?

ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಸೋಲಾರ್ ಪ್ರಕರಣ ವಿವಾದದ ರುವಾರಿ ಸರಿತಾ ಜತೆ ಲೈಂಗಿಕ ಸಂಬಂಧ ಬೆಳೆಸಿದ್ದರು ಎಂಬ ಆರೋಪ...
ಉಮ್ಮನ್ ಚಾಂಡಿ
ಉಮ್ಮನ್ ಚಾಂಡಿ
Updated on
ಕೊಚ್ಚಿ: ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಸೋಲಾರ್ ಪ್ರಕರಣ ವಿವಾದದ ರುವಾರಿ ಸರಿತಾ ಜತೆ ಲೈಂಗಿಕ ಸಂಬಂಧ ಬೆಳೆಸಿದ್ದರು ಎಂಬ ಆರೋಪ ಕೇಳಿ ಬಂದಿದೆ. ಸೋಲಾರ್ ಪ್ರಕರಣದ ಆರೋಪಿ ಬಿಜು ರಾಧಾಕೃಷ್ಣನ್ ಸೋಲಾರ್ ಕಮಿಷನ್‌ಗೆ ನೀಡಿದ ಹೇಳಿಕೆಯಲ್ಲಿ ಈ ಆರೋಪ ಮಾಡಿದ್ದಾರೆ. 
ಮುಖ್ಯಮಂತ್ರಿ ಮಾತ್ರವಲ್ಲದೆ ಸಚಿವರುಗಳಾದ ಶಿಬು ಬೇಬಿ ಜಾನ್, ಎಪಿ ಅನಿಲ್ ಕುಮಾರ್,  ಹೈಬಿ ಈಡನ್ ಎಂಎಲ್‌ಎ, ಆರ್ಯಾಡನ್ ಶೌಖತ್, ಅನಿಲ್ ಕುಮಾರ್ ಅವರ ಪಿಎ ನಸರುಲ್ಲಾ ಮೊದಲಾದವರು ಸರಿತಾ ಜತೆ ಲೈಂಗಿಕ ಸಂಬಂಧ ಹೊಂದಿದ್ದರು ಎಂದು ಬಿಜು ಹೇಳಿದ್ದಾರೆ.
ಇದರ ದೃಶ್ಯಗಳನ್ನು ಸರಿತಾ ಅವರು ರೆಕಾರ್ಡ್ ಮಾಡಿಟ್ಟಿದ್ದರು. ಅದನ್ನು ನಾನು ನೋಡಿದ್ದೇನೆ. ಆದರೆ ಮುಖ್ಯಮಂತ್ರಿಯವರನ್ನು ಆ ದೃಶ್ಯಗಳಲ್ಲಿ  ನೋಡಿ ನಾನೇ ನಂಬದಾದೆ. ಇತರರು ಸರಿತಾರೊಂದಿಗೆ ಇಂದ ದೃಶ್ಯಗಳನ್ನು ನಾನು ಮುಖ್ಯಮಂತ್ರಿಗೆ ತೋರಿಸಿದ್ದೇನೆ. ಆದರೆ ಅವರಿರುವ ದೃಶ್ಯಗಳನ್ನು ತೋರಿಸಲು ನನಗೆ ಸಾಧ್ಯವಾಗಲಿಲ್ಲ. ಸಮಿತಿ ಸಾಕ್ಷ್ಯ ಕೇಳಿದರೆ ನಾನು ಆ ಎಲ್ಲ ದೃಶ್ಯಗಳನ್ನು ಹಾಜರು ಪಡಿಸಲು ಸಿದ್ಧ ಎಂದಿದ್ದಾರೆ ಬಿಜು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com