ಪ್ರೀತಿಯಲ್ಲಿದೆ ಅಗಾಧ ಶಕ್ತಿ: ಅಸಹಿಷ್ಣುತೆಗೆ ಸಂಬಂಧಿಸಿದ 40 ನಿಮಿಷಗಳ ಪ್ರತಿಕ್ರಿಯೆಯಲ್ಲಿ ಮೋದಿ, ದಾದ್ರಿ ಘಟನೆಯ ಬಗ್ಗೆ ನೇರ ವಾಗಿ ಉಲ್ಲೇಖಿಸದಿದ್ದರೂ, 'ದೌರ್ಜನ್ಯದಂತಹ ಯಾವುದೇ ಘಟನೆಯೂ ನಮ್ಮ ಸಮಾಜಕ್ಕೆ ಕಪ್ಪುಚುಕ್ಕೆಯಿದ್ದಂತೆ. ಏಕತೆ ಮತ್ತು ಸೌಹಾರ್ದತೆಯೇ ದೇಶವನ್ನು ಮುನ್ನಡೆಸುವ ಏಕೈಕ ಮಾರ್ಗ. ಎಲ್ಲರ ನೋವನ್ನೂ ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ಮುಂದೆ ಅಂತಹ ಘಟನೆ ನಡೆಯದಂತೆ ನೋಡಿಕೊಳ್ಳಬೇಕು. ಸಮಾನತೆ ಮತ್ತು ಪ್ರೀತಿಯಲ್ಲಿ ಅಗಾಧ ಶಕ್ತಿಯಿದೆ. ನಮ್ಮಲ್ಲಿರುವ ಈ ಶಕ್ತಿಯನ್ನುಅರಿತುಕೊಳ್ಳಬೇಕು'' ಎಂದರು. ಪ್ರಸ್ತಾವಿತ 'ಏಕ್ ಭಾರತ್, ಶ್ರೇಷ್ಠ್ ಭಾರತ್' ಯೋಜನೆ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, 'ನೀನು ನೀನು, ನಾನು ನಾನು ಎಂಬುದರಿಂದ ದೇಶ ಮುಂದೆ ಹೋಗಲು ಸಾಧ್ಯವಿಲ್ಲ. ಹಾಗಾಗಿ ಎಲ್ಲರನ್ನೂ ಒಗ್ಗೂಡಿಸುವ ಈ ಯೋಜನೆ ರೂಪಿಸಲು ಮುಂದಾಗಿದ್ದೇನೆ. ಇಲ್ಲಿ ಒಂದು ರಾಜ್ಯ ಮತ್ತೊಂದು ರಾಜ್ಯದ ವಾರ್ಷಿಕ ಉತ್ಸವವನ್ನು ಆಚರಿಸುವ, ಅಲ್ಲಿನ ಭಾಷೆಯನ್ನು ಕಲಿಯುವ ಮತ್ತಿತರ ಯೋಚನೆಗಳನ್ನು ಸೇರಿಸಲು ಇಚ್ಛಿಸಿದ್ದೇನೆ'' ಎಂದರು.