ನೇಪಾಳ ಗಡಿಭಾಗದಲ್ಲಿ ದಾವೂದ್ ಸಹಚರ ಬಂಧನ

ಭೂಗತ ಲೋಕದ ದೊರೆ ದಾವೂದ್ ಇಬ್ರಾಹಿಂನ ಸಹಚರನೊಬ್ಬನನ್ನು ಭಾರತ ಗುಪ್ತಚರ ಇಲಾಖೆ ಭಾರತ ಮತ್ತು ನೇಪಾಳ...
ದಾವೂದ್ ಇಬ್ರಾಹಿಂ (ಸಂಗ್ರಹ ಚಿತ್ರ)
ದಾವೂದ್ ಇಬ್ರಾಹಿಂ (ಸಂಗ್ರಹ ಚಿತ್ರ)
Updated on: 
ದೆಹಲಿ:  ಭೂಗತ ಲೋಕದ ದೊರೆ ದಾವೂದ್ ಇಬ್ರಾಹಿಂನ ಸಹಚರನೊಬ್ಬನನ್ನು ಭಾರತ ಗುಪ್ತಚರ ಇಲಾಖೆ ಭಾರತ ಮತ್ತು ನೇಪಾಳ ಗಡಿಭಾಗದಲ್ಲಿ ಬಂಧಿಸಿದೆ.
ನೇಪಾಳ ಪೊಲೀಸರ ಸಹಾಯದಿಂದ ದಾವೂದ್ ಸಹಚರ ಅಬೀದ್ ಪಟೇಲ್ ಎಂಬಾತನ್ನು ಬಂಧಿಸಲಾಗಿದೆ.
ಗುಜರಾತ್‌ನ ಭರೂಚ್ ಜಿಲ್ಲೆಯಲ್ಲಿ ಇಬ್ಬರು ಬಿಜೆಪಿ ನಾಯಕರನ್ನು ಗುಂಡಿಟ್ಟು ಹತ್ಯೆಗೈದ ಆರೋಪ ಅಬೀದ್ ಮೇಲಿದ್ದು, ಆತನಿಗಾಗಿ ಶೋಧ ನಡೆಯುತ್ತಿತ್ತು.
ಬಿಹಾರದಿಂದ ಆತ ತಲೆ ಮರೆಸಿಕೊಂಡು ಬಿಹಾರಕ್ಕೆ ಹೋಗುತ್ತಿದ್ದಾನೆ ಎಂಬ ಮಾಹಿತಿ ಸಿಕ್ಕಿದ್ದು, ನೇಪಾಳ ಪೊಲೀಸರ ಸಹಾಯದಿಂದ ಆತನನ್ನು ಸೆರೆ ಹಿಡಿಯಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com