

ಮುಂಬೈ: ಮಹಾರಾಷ್ಟ್ರದ ಬರ ಪೀಡಿತ ಪ್ರದೇಶದ ರೈತರಿಗೆ ನೆರವಾಗಲು ವಡಾ ಪಾವ್ ಮಾರಾಟಗಾರರೊಬ್ಬರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 20 ಸಾವಿರ ರುಪಾಯಿ ದೇಣಿಗೆ ನೀಡಿದ್ದಾರೆ.
20 ಸಾವಿರ ರುಪಾಯಿ ದೇಣಿಗೆ ನೀಡಿದ ಮಂಗೇಶ್ ಅಹಿವಾಲೆ ಅವರ ಮಾನವೀಯತೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಡಿ ಹೊಗಳಿದ್ದಾರೆ.
'ಮಾನವೀಯತೆಗೆ ಇದೊಂದು ಅತ್ಯುತ್ತಮ ಉದಾಹರಣೆ. ವಡಾ ಪಾವ್ ಮಾರಾಟಗಾರ ಮಂಗೇಶ್ ನನ್ನನ್ನು ಭೇಟಿ ಮಾಡಿ, ಸಿಎಂ ಪರಿಹಾರ ನಿಧಿಗೆ 20 ಸಾವಿರ ರುಪಾಯಿ ದೇಣಿಗೆ ನೀಡಿದ್ದಾರೆ' ಎಂದು ಫಡ್ನವಿಸ್ ಟ್ವೀಟ್ ಮಾಡಿದ್ದಾರೆ.
'ಅಕ್ಟೋಬರ್ 11ರಂದು, ಅಂದಿನಿಂದ ವಡಾ ಪಾವ್ ಮಾರಾಟದಿಂದ ಬರುವ ಲಾಭವನ್ನು ಬರ ಪೀಡಿತ ಪ್ರದೇಶದ ರೈತರ ಪರಿಹಾರ ನೀಡುವುದಾಗಿ' ಮಂಗೇಶ್ ಘೋಷಿಸಿದ್ದರು.