ನವದೆಹಲಿ: ಭಯೋತ್ಪಾದನೆ ಕುರಿತ ವಿವರಗಳನ್ನು ಚೀನಾ ಸಹಿತ 24 ದೇಶಗಳೊಂದಿಗೆ ಭಾರತ ಹಂಚಿಕೊಳ್ಳುತ್ತಿದೆ ಎಂದು ಕೇಂದ್ರ ಗೃಹ ರಾಜ್ಯ ಸಚಿವ ಹರಿಭಾಯ್ ಚೌಧರಿ ಲೋಕಸಭೆಗೆ ತಿಳಿಸಿದ್ದರು.
ಭಯೋತ್ಪಾದನೆ ಮಟ್ಟ ಹಾಕುವ ಉದ್ದೇಶದಿಂದ ರಚನೆಯಾಗಿರುವ ಜಂಟಿ ಕಾರ್ಯಪಾಲನಾ ತಂಡದಲ್ಲಿ ಭಾರತ ಸದಸ್ಯ ದೇಶವಾಗಿದ್ದು ಗಡಿಯ ಮೂಲಕ ನಡೆಯುವ ಭಯೋತ್ಪಾದನೆಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ಸದಸ್ಯ ದೇಶದೊಂದಿಗೆ ಹಂಚಿಕೊಳ್ಳುತ್ತದೆ.
ರಾಷ್ಟ್ರೀಯ ಭದ್ರತೆ ಹಾಗೂ ದೇಶಗಳೊಂದಿಗಿನ ನಂಟಿನ ಹಿತಾಸಕ್ತಿ ಹಿನ್ನೆಲೆಯಲ್ಲಿ ಇದಕ್ಕಿಂತ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದಿದ್ದರು.