ದಿನ ಬಿಟ್ಟು ದಿನ ಖಾಸಗಿ ವಾಹನ ಸಂಚಾರ ಯೋಜನೆಗೆ ಸಂಸತ್ ನಲ್ಲಿ ಟೀಕೆ

ಪ್ರತಿನಿತ್ಯ ಸಂಚರಿಸುವ ಖಾಸಗಿ ವಾಹನಗಳಿಗೆ ದಿನ ಬಿಟ್ಟು ದಿನ (ತಿಂಗಳಿಗೆ ಹದಿನೈದು ದಿನ) ಮಾತ್ರ ಅವಕಾಶ ನೀಡಲು ನಿರ್ಧರಿಸಿರುವ ದೆಹಲಿ ಸರ್ಕಾರದ ನಿಯಮಕ್ಕೆ ಸಂಸತ್ ನಲ್ಲಿ ಟೀಕೆ ವ್ಯಕ್ತವಾಗಿದೆ.
ದಿನ ಬಿಟ್ಟು ದಿನ ಖಾಸಗಿ ವಾಹನ ಸಂಚಾರ ಯೋಜನೆಗೆ ಸಂಸತ್ ನಲ್ಲಿ ಟೀಕೆ
Updated on: 

ನವದೆಹಲಿ: ಪ್ರತಿನಿತ್ಯ ಸಂಚರಿಸುವ ಖಾಸಗಿ ವಾಹನಗಳಿಗೆ ದಿನ ಬಿಟ್ಟು ದಿನ (ತಿಂಗಳಿಗೆ ಹದಿನೈದು ದಿನ) ಮಾತ್ರ ಅವಕಾಶ ನೀಡಲು ನಿರ್ಧರಿಸಿರುವ ದೆಹಲಿ ಸರ್ಕಾರದ ನಿಯಮಕ್ಕೆ ಸಂಸತ್ ನಲ್ಲಿ ಟೀಕೆ ವ್ಯಕ್ತವಾಗಿದೆ.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿರುವ ಈಶಾನ್ಯ ದೆಹಲಿಯನ್ನು ಪ್ರತಿನಿಧಿಸುವ ಸಂಸದ ಮಹೇಶ್ ಗಿರಿ, ದೆಹಲಿ ಸರ್ಕಾರದ ನಿರ್ಧಾರದಿಂದ ಲಕ್ಷಾಂತರ ಜನರಿಗೆ ತೊಂದರೆಯಾಗಲಿದೆ. ಖಾಸಗಿ ವಾಹನಗಳಿಗೆ ದಿನ ಬಿಟ್ಟು ದಿನ ಸಂಚರಿಸಲು ಅವಕಾಶ ನೀಡಲು ದೆಹಲಿ ಸರ್ಕಾರ ಮುಂದಾಗಿದೆ ಆದರೆ 2013 ರಲ್ಲೇ ಸ್ಥಗಿತಗೊಳ್ಳಬೇಕಿದ್ದ ಒಖ್ಲಾದ ತ್ಯಾಜ್ಯ ದಿಂದ ವಿದ್ಯುತ್ ಉತ್ಪಾದಿಸುವ ಘಟಕ ಇನ್ನೂ ಕಾರ್ಯ ನಿರ್ವಹಿಸುತ್ತಿದ್ದರೂ ಈ ಬಗ್ಗೆ ದೆಹಲಿ ಸರ್ಕಾರ ಇನ್ನೂ ಏಕೆ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.
ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕದಿಂದ ಕ್ಯಾನ್ಸರ್ ಗೆ ಕಾರಣವಾಗುವ ಅನಿಲ ಹೊರಬರುತ್ತಿದ್ದು, ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದೆ ಎಂದು ಮಹೇಶ್ ಗಿರಿ ಆರೋಪಿಸಿದ್ದಾರೆ. ಇದನ್ನು ಸ್ಥಗಿತಗೊಳಿಸದೇ ಖಾಸಗಿ ವಾಹನಗಳು ದಿನ ಬಿಟ್ಟು ದಿನ ಸಂಚರಿಸುವಂತೆ ಆದೇಶ ಹೊರಡಿಸಿದರೆ ಬಡ ಜನರಿಗೆ ತೊಂದರೆಯಾಗಲಿದೆ ಎಂದು ಮಹೇಶ್ ಗಿರಿ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com