

ನವದೆಹಲಿ: ಉತ್ತರ ಪ್ರದೇಶದದ ಸಚಿವ ಅಜಂ ಖಾನ್ ಆರೆಸ್ಸೆಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸುವಂತೆ ಒತ್ತಾಯಿಸಿದ್ದಾರೆ.
''ಆರೆಸ್ಸೆಸ್ ಸ್ವಯಂ ಸೇವಕರು ದೇಶದಲ್ಲಿ ಕೋಮು ಗಲಭೆಗಳಿಗೆ ಸಂಚು ರೂಪಿಸುವ ಮತ್ತು ಅವುಗಳನ್ನು ವ್ಯವಸ್ಥಿತವಾಗಿ ಹುಟ್ಟುಹಾಕುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಆರೆಸ್ಸೆಸ್‌ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಬೇಕು,'' ಎಂದು ಅಜಂ ಖಾನ್ ಆಗ್ರಹಿಸಿದ್ದಾರೆ.
ಅಜಂಖಾನ್ ಹೇಳಿಕೆಗೆ ಬಿಜೆಪಿ ಕಟುವಾಗಿ ಪ್ರತಿಕ್ರಿಯಿಸಿದೆ. ''ಕೋಮು ಗಲಭೆ ಸೃಷ್ಟಿಸುವ ಪ್ರಯತ್ನ ಇದಾಗಿದೆ. ಉತ್ತರ ಪ್ರದೇಶ ಸರಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಮತ್ತು ಒಂದು ವರ್ಗದ ಜನರ ಮನವೊಲಿಕೆಗೆ ಅವರು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ಕಾರ್ಯದರ್ಶಿ ಶ್ರೀಕಾಂತ್ ಶರ್ಮ ಟೀಕಿಸಿದ್ದಾರೆ.
ಮಾಜಿ ಪ್ರಧಾನಿ ದಿವಂಗತ ನೆಹರೂ ಅವರಿಂದ ಹಿಡಿದು ಹಿಂದಿನ ಕಾಂಗ್ರೆಸ್ ಪ್ರಧಾನಿಗಳ್ಯಾರೂ ಆರೆಸ್ಸೆಸ್ ಅಪಾಯಕಾರಿ ಎಂದು ಹೇಳದಿರುವಾಗ ಈ ಅಜಂ ಖಾನ್ ಹೀಗೆ ಮಾತನಾಡಲು ಯಾರು?'' ಎಂದು ಪ್ರಶ್ನಿಸಿದ್ದಾರೆ. .