

ನವದೆಹಲಿ; ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಮೂರು ವರ್ಷಗಳ ನಂತರ ಮೊದಲ ಬಾರಿಗೆ ತಮ್ಮ ಮೌನ ಮುರಿದು ಸಂಸತ್ತಿನಲ್ಲಿ ಪ್ರಶ್ನೆ ಕೇಳಿದ್ದಾರೆ.
ಜೂನ್ 3, 2012 ರಲ್ಲಿ ರಾಜ್ಯ ಸಭಾ ಸದಸ್ಯರಾಗಿ ನೇಮಕಗೊಂಡ ನಂತರ ಸಚಿನ್ ತೆಂಡೂಲ್ಕರ್ ಸದನಕ್ಕೆ ಹಾಜರಾಗಿದ್ದು ತೀರಾ ಕಡಿಮೆ. ಸದನದಲ್ಲಿ ಅವರ ಕಳಪೆ ಹಾಜರಾತಿಗಾಗಿ ಅನೇಕ ಟೀಕೆಗಳನ್ನು ಎದುರಿಸಿದ್ದಾರೆ.
ರಾಜ್ಯಸಭೆಯಲ್ಲಿ ಕೊಲ್ಕೋತಾದಲ್ಲಿ ಮೆಟ್ರೋ ರೈಲು ಸಂಚಾರ ಸಂಬಂಧ ರೈಲ್ವೆ ಇಲಾಖೆ ಸಚಿವರಿಗೆ ಲಿಖಿತ ಪ್ರಶ್ನೆ ಕೇಳಿದ ಸಚಿನ್, ಮುಂಬೈ, ಚೆನ್ನೈ, ದೆಹಲಿಗಳಲ್ಲಿ ಇರುವಂತೆ ಕೊಲ್ಕೋತಾದಲ್ಲೂ ಮೆಟ್ರೋ ರೈಲು ತರುವ ಬಗ್ಗೆ ಉತ್ತರಿಸುವಂತೆ ಕೇಳಿದ್ದಾರೆ.
ಇನ್ನೂ ಚಾಲನಾ ಪರವಾನಗಿ ನೀಡುವಾಗ ಕೆಲವೊಂದು ಬದಲಾವಣೆ ತರುವ ಬಗ್ಗೆಯೂ ಸಹ ಸಚಿನ್ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ.