ಭಾರತದಿಂದ 7.30 ಲಕ್ಷ ಟನ್ ಮಾಂಸ ರಫ್ತು

ಪ್ರಸಕ್ತ ಹಣಕಾಸು ಸಾಲಿನ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಭಾರತ 2,339.60 ದಶಲಕ್ಷ ಡಾಲರ್ ಮೌಲ್ಯದ 7.30 ಲಕ್ಷ ಟನ್ ಮಾಂಸ ರಫ್ತು ಮಾಡಿದೆ...
ಮಾಂಸ ರಫ್ತು
ಮಾಂಸ ರಫ್ತು
Updated on: 
ನವದೆಹಲಿ: ಪ್ರಸಕ್ತ ಹಣಕಾಸು ಸಾಲಿನ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಭಾರತ 2,339.60 ದಶಲಕ್ಷ ಡಾಲರ್ ಮೌಲ್ಯದ 7.30 ಲಕ್ಷ ಟನ್ ಮಾಂಸ ರಫ್ತು ಮಾಡಿದೆ. 
ಈ ಸದ್ಯಕ್ಕೆ ಗೋಮಾಂಸ ರಫ್ತು ನಿಷೇಧಿಸುವ ಉದ್ದೇಶವೂ ಸರ್ಕಾರದ ಮುಂದೆ ಇಲ್ಲ ಎಂದು ಕೇಂದ್ರ ವಾಣಿಜ್ಯ ಸಚಿವರು ರಾಜ್ಯಸಭೆಗೆ ತಿಳಿಸಿದ್ದಾರೆ. ಕಳೆದ ಹಣಕಾಸು ಸಾಲಿನಲ್ಲಿ ಭಾರತ 15 ಲಕ್ಷ ಟನ್ ಮಾಂಸ ರಫ್ತು ಮಾಡಿದ್ದು ಇದರ ಮೌಲ್ಯ 4,919.62 ದಶಲಕ್ಷ ಡಾಲರ್‍ಗಳಾಗಿವೆ. 
ಈ ಬಾರಿ ಸರ್ಕಾರ ರಫ್ತು ಗುರಿ ನಿಗದಿ ಮಾಡಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದು, ಬೀಫ್ ಹೊರತಾದ ಮಾಂಸ ಮತ್ತು ಮಾಂಸದ ಉತ್ಪನ್ನಗಳ ರಫ್ತಿಗೆ ಹಣಕಾಸು ನೆರವು ನೀಡಲಾಗುವುದು ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com