ಮುಂದಿನ ವರ್ಷ ಔಷಧಿಗಾಗಿ ಪ್ರತ್ಯೇಕ ಸಚಿವಾಲಯ:ಅನಂತ್ ಕುಮಾರ್

ಔಷಧಕ್ಕಾಗಿ ಮುಂದಿನ ವರ್ಷ ಪ್ರತ್ಯೇಕವಾದ ಸಚಿವಾಲಯ ಆರಂಭವಾಗಲಿದೆ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್ ತಿಳಿಸಿದ್ದಾರೆ.
ಅನಂತ್ ಕುಮಾರ್
ಅನಂತ್ ಕುಮಾರ್

ನವದೆಹಲಿ: ಔಷಧಕ್ಕಾಗಿ ಮುಂದಿನ ವರ್ಷ ಪ್ರತ್ಯೇಕವಾದ ಸಚಿವಾಲಯ ಆರಂಭವಾಗಲಿದೆ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್ ತಿಳಿಸಿದ್ದಾರೆ.

ಕೇಂದ್ರಸರ್ಕಾರ ಕಟೋಚ್ ಸಮಿತಿ ಶಿಫಾರಸ್ಸನ್ನು ಶೀಘ್ರವೇ ಅನುಷ್ಠಾನ ಮಾಡಲಿದ್ದು, ಅದರಂತೆ ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವ ಭಾರೀ ಪ್ರಮಾಣ ಔಷಧವನ್ನು ನಿಲ್ಲಿಸುವುದಾಗಿ ಅವರು ಭರವಸೆ ವ್ಯಕ್ತ ಪಡಿಸಿದರು.

ಈ ಸಂಬಂಧ ಪ್ರಧಾನ ಮಂತ್ರಿ ಕಚೇರಿ ಜೊತೆ ಚರ್ಚಿಸಿದ್ದು, ಈ ಇಲಾಖೆ ಉತ್ತಮವಾಗಿ ಕೆಲಸ ನಿರ್ವಹಿಸಲಿದೆ ಎಂದು ಪಿಎಚ್ ಡಿ ಚೇಂಬರ್ ಆಫ್ ಕಾಮರ್ಸ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅನಂತ್ ಕುಮಾರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com