

ನವದೆಹಲಿ: ನಾಗರಿಕ ಅಣು ಶಕ್ತಿ ಬಳಕೆಗೆ ಶನಿವಾರ ಭಾರತ ಮತ್ತು ಜಪಾನ್ ಒಪ್ಪಂದಕ್ಕೆ ಸಹಿ ಹಾಕಿದ್ದು, ಈ ಒಪ್ಪಂದದ ಉದ್ದೇಶ ಕೇವಲ ವಾಣಿಜ್ಯ ಮತ್ತು ಸ್ವಚ್ಛ ಇಂಧನವಷ್ಟೇ ಅಲ್ಲ ಬದಲಾಗಿ ಜಾಗತಿಕ ಭದ್ರತೆಯ ಸಲುವಾಗಿ ಪರಸ್ಪರ ಸಂಬಂಧ ಮತ್ತು ನಂಬಿಕೆಯ ಒಪ್ಪಂದ ಎಂದು ಬಣ್ಣಿಸಲಾಗಿದೆ.
ಈ ಒಪ್ಪಂದಕ್ಕೆ ಭಾರತೀಯ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಸ್ನೋ ಅಬೆ ಸಹಿ ಹಾಕಿದ್ದರೆ.
"ಆರ್ಥಿಕ ಸಹಭಾಗಿತ್ವದಲ್ಲಿ ಜಪಾನ್ ಜೊತೆಗೆ ಅಗಾಧವಾದ ಮುನ್ನಡೆಯನ್ನು ಗಳಿಸಿದ್ದೇವೆ. ಹಾಗೆಯೇ ಭದ್ರತಾ ಸಂಬಧಲ್ಲೂ" ಎಂದು ಇದೇ ಸಮಯದಲ್ಲಿ ಮೋದಿ ಹೇಳಿದ್ದಾರೆ.
ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಸಂಬಧದಲ್ಲಿ ಉನ್ನತವಾದ ಮೌಲ್ಯ ಇದೆ ಎಂದಿರುವ ಮೋದಿ "ಭಾರತಕ್ಕೆ ವಿಶಿಷ್ಟವಾಗಿರುವ ಆರ್ಥಿಕ ಪ್ರಸ್ತಾವನೆಗಳಿಗೆ ಶಿಸ್ನೋ ಪ್ರಾಮಾಣಿಕವಾಗಿ ಮತ್ತು ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಜಪಾನಿನ ಖಾಸಗಿ ಹೂಡಿಕೆ ಕೂಡ ಹೆಚ್ಚಳಗೊಂಡಿದೆ" ಎಂದು ಮೋದಿ ಹೇಳಿದ್ದಾರೆ.
ಭದ್ರತಾ ಉತ್ಪನ್ನಗಳ ತಯಾರಿಕೆ ಮಾತು ಭದ್ರತಾ ಸಂಬಧಗಳ ಅಬಿವೃದ್ಧಿಗಾಗಿ ಕೂಡ ಒಪ್ಪಂದಗಳಿಗೆ ಸಹಿ ಮಾಡಲಾಗಿದೆ.
"ಈ ಸಂಬಧವನ್ನು ಹೊಸ ಘಟ್ಟಕ್ಕೆ ತೆಗೆದುಕೊಂಡು ಹೋಗಲಿದ್ದೇವೆ" ಎಂದಿದ್ದಾರೆ ಅಬೆ.