ಭಾರತೀಯ ಸೇನೆಗೆ ಹೊಸ ಘಾತುಕ ಶಕ್ತಿ "ಘಟಕ್" ಡ್ರೋಣ್

ಶೀಘ್ರದಲ್ಲೇ ಭಾರತೀಯ ಸೇನೆಗೆ ಮತ್ತೊಂದು ಹೊಸ ಘಾತುಕ ಶಕ್ತಿ ಸೇರ್ಪಡೆಯಾಗಲಿದ್ದು, ನಮ್ಮ ಸೈನಿಕರ ಯಾವುದೇ ಪ್ರಾಣ ಹಾನಿ ಇಲ್ಲದೇ ಶತ್ರು ರಾಷ್ಟ್ರದ ಸೈನಿಕರನ್ನು ಕ್ಷಣ ಮಾತ್ರದಲ್ಲಿ ಹೊಡೆದು ಹಾಕಬಲ್ಲ ಘಟಕ್...
ಭಾರತೀಯ ಸೇನೆಯ ಹೊಸ ಅಸ್ತ್ರ ಘಟಕ್ ಡ್ರೋಣ್ (ಸಾಂದರ್ಭಿಕ ಚಿತ್ರ)
ಭಾರತೀಯ ಸೇನೆಯ ಹೊಸ ಅಸ್ತ್ರ ಘಟಕ್ ಡ್ರೋಣ್ (ಸಾಂದರ್ಭಿಕ ಚಿತ್ರ)
Updated on: 

ನವದೆಹಲಿ: ಶೀಘ್ರದಲ್ಲೇ ಭಾರತೀಯ ಸೇನೆಗೆ ಮತ್ತೊಂದು ಹೊಸ ಘಾತುಕ ಶಕ್ತಿ ಸೇರ್ಪಡೆಯಾಗಲಿದ್ದು, ನಮ್ಮ ಸೈನಿಕರ ಯಾವುದೇ ಪ್ರಾಣ ಹಾನಿ ಇಲ್ಲದೇ ಶತ್ರು ರಾಷ್ಟ್ರದ ಸೈನಿಕರನ್ನು ಕ್ಷಣ ಮಾತ್ರದಲ್ಲಿ ಹೊಡೆದು ಹಾಕಬಲ್ಲ ಘಟಕ್ ಡ್ರೋನ್ ಉತ್ಪಾದನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾಗಿರುವ ಮೇಕ್ ಇನ್ ಇಂಡಿಯಾದ ಅಡಿಯಲ್ಲಿ ಈ ಚಾಲಕ ರಹಿತ ಲಘು ಯುದ್ಧ ವಿಮಾನ ಘಟಕ್ ಡ್ರೋಣ್ ಅನ್ನು ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರದ ಮೂಲಗಳ ಪ್ರಕಾರ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು 2.650 ಕೋಟಿ ಮೌಲ್ಯದ ಘಟಕ್ ಡ್ರೋಣ್ ನಿರ್ಮಾಣ ಯೋಜನೆಗೆ ಅಸ್ತು ಎಂದಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಕೆಲವೇ ವರ್ಷಗಳ ಅವಧಿಯಲ್ಲಿ ಭಾರತೀಯ ಸೇನೆ ತನ್ನದೇ ಸ್ವದೇಶಿ ನಿರ್ಮಿತ ಚಾಲಕ ರಹಿತ ಲಘು ಯುದ್ಧ ವಿಮಾನ ಘಟಕ್ ಅನ್ನು ಹೊಂದಲಿದೆ.

ಈಗಾಗಲೇ ಅಮೆರಿಕ, ರಷ್ಯಾ, ಫ್ರಾನ್ಸ್ ಮತ್ತು ಚೀನಾ ದೇಶಗಳು ಈ ಡ್ರೋನ್ ಗಳನ್ನು ತಮ್ಮ ತಮ್ಮ ಸೇನೆಯಲ್ಲಿ ಹೊಂದಿದ್ದು, ಶೀಘ್ರದಲ್ಲೇ ಭಾರತ ಕೂಡ ತನ್ನ ಸೇನೆಗೆ ಈ ಘಾತುಕ ಶಕ್ತಿಯನ್ನು ಹೊಂದಲಿದೆ. ಇನ್ನು ತಾಂತ್ರಿಕವಾಗಿ ಭಾರತದ ಡ್ರೋನ್ ವಿಮಾನಗಳು ಇತರೆ ದೇಶಗಳ ಡ್ರೋನ್ ಗಳಷ್ಟೇ ಸಾಮರ್ಥ್ಯವನ್ನು ಹೊಂದಲಿದ್ದು, ಈಗಾಗಲೇ ತೇಜಸ್ ಯುದ್ಧ ವಿಮಾನದಲ್ಲಿ ಬಳಕೆ ಮಾಡಲಾಗುತ್ತಿರುವ ಕಾವೇರಿ ಎಂಜಿನ್ ಅನ್ನೇ ಇದಕ್ಕೂ ಬಳಕೆ ಮಾಡಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಘಟಕ್ ಡ್ರೋಣ್ ಗೆ ಕಾವೇರಿ ಶುಷ್ಕ ಎಂಜಿನ್ ಬಳಕೆ ಮಾಡಲು ನಿರ್ಧರಿಸಲಾಗಿದ್ದು, ಇದರಿಂದ ಹೆಚ್ಚಾಗಿ ಕಾರ್ಯನಿರ್ವಹಿಸಿದಾಗ ಎಂಜಿನ್ ಸುಟ್ಟುಹೋಗಬಹುದೆಂಬ ಆತಂಕ ದೂರವಾಗಿದೆ.

ಪ್ರಸ್ತುತ ಈ ಘಟಕ್ ಡ್ರೋಣ್ ಯೋಜನೆಗೆ ಕೇಂದ್ರ ರಕ್ಷಣಾ ಇಲಾಖೆ ಅನುಮೋದನೆ ನೀಡಿದ್ದು, ಕೇಂದ್ರ ವಿತ್ತ ಸಚಿವಾಲಯ ಯೋಜನೆಯ ಸಾಧಕ-ಭಾದಕಗಳನ್ನು ಪರಿಶೀಲಿಸುತ್ತಿದೆ.  ಒಟ್ಟಾರೆ ಭಾರತೀಯ ಸೇನೆಯನ್ನು ಆಧುನೀಕರಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಆಶಯ ನಿಧಾನವಾಗಿ ಈಡೇರುತ್ತಿದ್ದು, ಇನ್ನು ಕೆಲವೇ ವರ್ಷಗಳಲ್ಲಿ ಸೇನೆಗೆ ಮತ್ತೊಂದು ಘಾತುಕ ಶಕ್ತಿಯ ಸೇರ್ಪಡೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com