ಸುಪ್ರೀಂ ಕೋರ್ಟ್‌ನಲ್ಲಿ ಈ ಪ್ರಕರಣ ಇನ್ನೂ ಇತ್ಯರ್ಥವಾಗದೇ ಇರುವಾಗ ರಾಜಸ್ತಾನಕ್ಕೆ ಇಲ್ಲಿಂದ ಕಲ್ಲುಗಳನ್ನು ತೆಗೆದುಕೊಂಡು ಹೋಗುವುದು ಅಲ್ಲಿನ ಶೇ. 10-15 ರಷ್ಟು ಮತಗಳನ್ನು ಆಕರ್ಷಿಸಲೇ ವಿನಾ ಬೇರ್ಯಾವ ಉದ್ದೇಶದಿಂದ ಅಲ್ಲ. ಈ ರೀತಿಯ ಕೆಲಸಗಳನ್ನು ಮಾಡುವ ಮೂಲಕ ಮಾಧ್ಯಮದವರ ಗಮನ ಸೆಳೆಯಲಾಗುತ್ತಿದೆ. ಇದೆಲ್ಲವೂ ರಾಜಕೀಯ ಉದ್ದೇಶದಿಂದಲೇ ಹೊರತು ಧಾರ್ಮಿಕ ಉದ್ದೇಶದಿಂದ ಆಗುತ್ತಿರುವ ಚಟುವಟಿಕೆಗಳಲ್ಲ ಎಂದು ಜಿಲಾನಿ ಸುದ್ದಿ ಮಾಧ್ಯಮವೊಂದರಲ್ಲಿ ಹೇಳಿದ್ದಾರೆ.