ಸಮ ಬೆಸ ನಿಯಮ; ಮುಂಬೈಯ ಮಾಜಿ ಪೊಲೀಸ್ ಅಧಿಕಾರಿಗೆ ಇಂಡಿಯಾ ಗೇಟ್ ಬಳಿ ತಡೆ

ಸಮ ಬೆಸ ಸಂಖ್ಯೆಯ ವಾಹನ ಚಾಲನೆ ನಿಯಮ ಜಾರಿಯಾಗಿರುವ ದೆಹಲಿಯಲ್ಲಿ ಶುಕ್ರವಾರ ಸಮ ಸಂಖ್ಯೆಯ ಕಾರು ಚಲಾಯಿಸಿದ...
ಸತ್ಯಪಾಲ್ ಸಿಂಗ್
ಸತ್ಯಪಾಲ್ ಸಿಂಗ್
ನವದೆಹಲಿ: ಸಮ ಬೆಸ ಸಂಖ್ಯೆಯ ವಾಹನ ಚಾಲನೆ ನಿಯಮ ಜಾರಿಯಾಗಿರುವ ದೆಹಲಿಯಲ್ಲಿ ಶುಕ್ರವಾರ ಸಮ ಸಂಖ್ಯೆಯ ಕಾರು ಚಲಾಯಿಸಿದ ಬಿಜೆಪಿ ಸಂಸದ ಮತ್ತು ಮುಂಬೈಯ ಮಾಜಿ ಪೊಲೀಸ್ ಕಮಿಷನರ್ ಸತ್ಯಪಾಲ್ ಸಿಂಗ್ ಅವರಿಗೆ ದೆಹಲಿ ಗೇಟ್ ಬಳಿ ತಡೆಯೊಡ್ಡಿರುವ ಬಗ್ಗೆ ವರದಿಯಾಗಿದೆ.
ಈ ಬಗ್ಗೆ ಸುದ್ದಿ ಮಾಧ್ಯಮವೊಂದರಲ್ಲಿ ಮಾತನಾಡಿದ ಸಿಂಗ್, ನನ್ನ ಕಾರು ಸಮ ಸಂಖ್ಯೆಯದ್ದು. ಆದರೆ ನನಗೆ ದಂಡ ವಿಧಿಸಲಾಗಿಲ್ಲ, ಆದರೆ ನನಗೆ ವಿನಾಯಿತಿ ಇರುತ್ತದೆ. ನಾನೊಬ್ಬ ಪೊಲೀಸ್ ಕಮಿಷನರ್, ನಾನು ನಿಯಮವನ್ನು ಉಲ್ಲಂಘಿಸುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ ಸಿಂಗ್ ಅವರಿಗೆ ಪೊಲೀಸರು ಗಂಡ ವಿಧಿಸಿಲ್ಲ. ಬದಲಾಗಿ ಕಾರು ನಿಯಮ ಉಲ್ಲಂಘಿಸಿದೆ ಎಂದು ಪತ್ರ ನೀಡಿದ್ದಾರೆ.
2014ರ ಸಾರ್ವತ್ರಿಕ ಚುನಾವಣೆಯಲ್ಲಿ ಸಿಂಗ್ ಉತ್ತರಪ್ರದೇಶದ ಭಾಗ್‌ಪಟ್ ನಿಂದ ವಿಜಯಿಸಿದ್ದರು.
ಸಮ ಬೆಸ ಸಂಖ್ಯೆಯ ವಾಹನ ಚಾಲನೆ ನಿಯಮ ದೆಹಲಿಯಲ್ಲಿಂದು ಜಾರಿಗೆ ಬಂದಿದ್ದು, 15 ದಿನಗಳ ಕಾಲ ಇದು ಮುಂದುವರಿಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com