ವಿಮಾನದಲ್ಲಿ ಉದ್ಯಮಿಯಿಂದ ಯುವತಿಗೆ ಲೈಂಗಿಕ ಕಿರುಕುಳ

ವಿಮಾನದಲ್ಲಿ ಲೈಂಗಿಕ ಕಿರುಕುಳ ನೀಡಿದ್ದ ಉದ್ಯಮಿಯೊಬ್ಬನ ವಿಡಿಯೋವನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವ...
ವಿಮಾನದಲ್ಲಿ ಉದ್ಯಮಿಯಿಂದ ಯುವತಿಗೆ ಲೈಂಗಿಕ ಕಿರುಕುಳ

ಮುಂಬೈ: ವಿಮಾನದಲ್ಲಿ ಲೈಂಗಿಕ ಕಿರುಕುಳ ನೀಡಿದ್ದ ಉದ್ಯಮಿಯೊಬ್ಬನ ವಿಡಿಯೋವನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವ ಮೂಲಕ ಯುವತಿ ಕೀಚಕನಿಗೆ ಬುದ್ಧಿಕಲಿಸಿದ್ದಾಳೆ.

ಮುಂಬೈನಿಂದ ಭುಬನೇಶ್ವರ್ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಉದ್ಯಮಿಯೊಬ್ಬ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.

ಯುವತಿಯ ಸೀಟಿನ ಹಿಂಬದಿಯಲ್ಲಿ ಕುಳಿತಿದ್ದ ಆ ವ್ಯಕ್ತಿ, ಯುವತಿ ಕುಳಿತಿದ್ದ ಸೀಟಿನ ಗ್ಯಾಪ್‌ನಲ್ಲಿ ಕೈ ಹಾಕಿ ಆಕೆಯನ್ನು ಮುಟ್ಟಿದ್ದಾನೆ. ಆಕ್ರೋಶಗೊಂಡ ಯುವತಿ, ವಿಮಾನ ಲ್ಯಾಂಡ್ ಆಗುತ್ತಿದ್ದಂತೆ, ಎದ್ದು ನಿಂತು ಆತನ ಚಿತ್ರ ಮತ್ತು ವಿಡಿಯೋವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾಳೆ.

ಈ ವ್ಯಕ್ತಿ ನನ್ನ ಸೀಟಿನ ಹಿಂಬದಿಯಲ್ಲಿ ನನಗೆ ಕುಳಿತು ಲೈಂಗಿಕ ಕಿರುಕುಳ ನೀಡಿದ್ದಾನೆ. ವಿಮಾನ ಲ್ಯಾಂಡ್ ಆಗುವ ವೇಳೆಗೆ ನಾನು ಎದ್ದು ನಿಂತು ಹಿಂದೆ ತಿರುಗಿ ನೋಡಿದಾಗ, ಆತನ ಕೈ ನಾನು ಕುಳಿತಿದ್ದ ಸೀಟಿನ ಗ್ಯಾಪ್‌ನಲ್ಲೇ ಇತ್ತು. ಮತಷ್ಟು ನನ್ನನ್ನು ಮುಟ್ಟಲು ಯತ್ನಿಸುತ್ತಿದ್ದನು. ದೂರು ನೀಡಿದರೆ ಕಾನೂನು ಕ್ರಮ ತೆಗೆದುಕೊಳ್ಳುವುದು ಅಷ್ಟರಲ್ಲೇ ಎಂದು ಭಾವಿಸಿ ಆತನ ವಿಡಿಯೋ ಹಿಡಿದು ಆಪ್‌ಲೋಡ್ ಮಾಡಿದ್ದೇನೆ ಎಂದು ಹೇಳಿದ್ದಾಳೆ.

ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

Watch video here

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com