ತೀವ್ರ ಆಕ್ರೋಶಕ್ಕೆ ಗುರಿಯಾದ ಎಐಬಿ ನಾಕ್‌ಔಟ್‌ ಕಾಮಿಡಿ ಶೋ

ಎಐಬಿ ನಾಕ್‌ಔಟ್‌ ಕಾಮಿಡಿ ಶೋ
ಎಐಬಿ ನಾಕ್‌ಔಟ್‌ ಕಾಮಿಡಿ ಶೋ
Updated on

ಮುಂಬೈ: ಇತ್ತೀಚಿನ ದಿನಗಳಲ್ಲಿ ರಿಯಾಲಿಟಿ ಶೋ, ಡ್ಯಾನ್ಸಿಂಗ್ ಶೋ, ಕಾಮಿಡಿ ಶೋಗಳು ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿವೆ. ಈ ಜನಪ್ರಿಯತೆಯನ್ನೇ ಏನ್ ಕ್ಯಾಷ್ ಮಾಡಿಕೊಳ್ಳುವ ಸಲುವಾಗಿ ನಿರ್ದೇಶಕ ಕರಣ್‌ ಜೋಹರ್‌, ನಟ ಅರ್ಜುನ್‌ ಕಪೂರ್‌ ಮತ್ತು ರಣವೀರ್‌ ಸಿಂಗ್‌ ನಡೆಸಿಕೊಡುವ ಆಲ್‌ ಇಂಡಿಯಾ ಬ್ಯಾಕ್‌ಚೋದ್‌ (ಎಐಬಿ) ನಾಕ್‌ಔಟ್‌ ಕಾಮಿಡಿ ಕಾರ್ಯಕ್ರಮ ಇದೀಗ ತೀವ್ರ ವಿವಾದ ಸೃಷ್ಟಿಸಿದೆ.

ನಾಕ್ಔಟ್ ಕಾಮಿಡಿ ಕಾರ್ಯಕ್ರಮದಲ್ಲಿ ಮುಖ್ಯವಾಗಿ ರಾಜಕಾರಣಿಗಳನ್ನು ಗುರಿಯಾಗಿರಿಸಿಕೊಂಡು ಕೀಳು ಮಟ್ಟದ ಹೊಲಸು ಮತ್ತು ನಿಂದನಾ ಸಂಭಾಷಣೆಯನ್ನು ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಕಾರ್ಯಕ್ರಮ ಆಯೋಜಕರ ವಿರುದ್ದ ಕ್ರಮಕೈಗೊಳ್ಳಬೇಕೆಂದು ವಿವಿಧ ರಾಜಕೀಯ ಪಕ್ಷಗಳು ಮಹಾರಾಷ್ಟ್ರ ಸರ್ಕಾರವನ್ನು ಆಗ್ರಹಿಸಿದ್ದು,ಕಾರ್ಯಕ್ರಮ ಆಯೋಜಕರು ಕ್ಷಮೆ ಯಾಚಿಸಬೇಕೆಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ ಬೇಡಿಕೆ ಇಟ್ಟಿದ್ದು, ಈಗಾಗಲೇ ಎಐಬಿ ಯುಟ್ಯೂಬ್‌ನಲ್ಲಿರುವ ವಿಡಿಯೋಗಳನ್ನು ಕೆಲ ಸಮಯಕ್ಕೆ ತೆಗೆದು ಹಾಕಿದೆ.

ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಅಂಶಗಳನ್ನು ಪರಿಶೀಲಿಸಲಾಗುವುದು ಎಂದು ಮಹಾರಾಷ್ಟ್ರ ಸಿಎಂ ಫ‌ಡ್ನವೀಸ್‌ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com