ಶಾರೂಖ್ ಮನೆ ಮುಂದಿದ್ದ ರ್ಯಾಂಪ್ ತೆರವು

ಬಾಲಿವುಡ್ ನಟ ಶಾರುಖ್ ಖಾನ್ ಅವರ ಮುಂಬೈ ನಿವಾಸ 'ಮನ್ನತ್‌' ಮುಂದಿನ ರಸ್ತೆಗೆ ಹೊಂದಿಕೊಂಡಂತೆ ಅಕ್ರಮವಾಗಿ ನಿರ್ಮಿಸಿದ್ದ...
ಶಾರೂಖ್ ಮನೆ ಮುಂದಿದ್ದ ರ್ಯಾಂಪ್ ತೆರವು

ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಅವರ ಮುಂಬೈ ನಿವಾಸ 'ಮನ್ನತ್‌' ಮುಂದಿನ ರಸ್ತೆಗೆ ಹೊಂದಿಕೊಂಡಂತೆ ಅಕ್ರಮವಾಗಿ ನಿರ್ಮಿಸಿದ್ದ 'ರ್ಯಾಂಪ್‌' ಅನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಶನಿವಾರ ತೆರವುಗೊಳಿಸಿದರು.

ಈ ರ್ಯಾಂಪ್ ಅನ್ನು ಶಾರುಖ್ ಮನೆಗೆ ಭೇಟಿ ಕೊಡುವವರ ವಾಹನ ನಿಲ್ಲಿಸಲು ಬಳಸಲಾಗುತ್ತಿತ್ತು. ಆದರೆ, ಇದರಿಂದ ಸಾರ್ವಜನಿಕರಿಗೆ ಕಿರಿಕಿರಿ ಆಗುತ್ತಿದ್ದುದರಿಂದ ಬಿಜೆಪಿ ಸಂಸದೆ ಪೂನಂ ಮಹಾಜನ್ ಅವರು ಪಾಲಿಕೆಗೆ ದೂರು ಸಲ್ಲಿಸಿದ್ದರು.

ಅದರಂತೆ ಶಾರುಖ್‌ಗೆ ಈ ರ್ಯಾಂಪ್ ತೆರವುಗೊಳಿಸಲು 2 ವಾರಗಳ ಕಾಲಾವಕಾಶ ನೀಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com