

ನವದೆಹಲಿ: ವಾಟ್ಸ್ ಆ್ಯಪ್ನಲ್ಲಿ ಹರಿದಾಡು ತ್ತಿರುವ 2 ಅತ್ಯಾಚಾರ ಪ್ರಕರಣಗಳ ವಿಡಿಯೋಗಳ ಬಗ್ಗೆ ಸುಪ್ರೀಂಕೋರ್ಟ್ ಗರಂ ಆಗಿದೆ. ಈ ಬಗ್ಗೆ ಕೂಡಲೇ ಸಿಬಿಐ ತನಿಖೆ ನಡೆಸಿ ತಪ್ಪಿ
ತಸ್ಥರನ್ನು ಬಂಧಿಸುವಂತೆ ಆದೇಶಿಸಿದೆ.ಜತೆಗೆ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ, ದೆಹಲಿ ಮತ್ತು ತೆಲಂಗಾಣ ರಾಜ್ಯ ಸರ್ಕಾರಗಳಿಗೆ ಹಾಗೂ ಕೇಂದ್ರಕ್ಕೆ ನೋಟಿಸ್ ನೀಡಿದೆ. ನ್ಯಾ. ಮದನ್ ಬಿ.ಲೋಕುರ್ ಮತ್ತು ನ್ಯಾ.ಯು.ಯು.ಲಲಿತ್ ಅವರನ್ನೊಳಗೊಂಡ ನ್ಯಾಯಪೀಠ ಈ ಆದೇಶ ನೀಡಿದೆ. ಈ ಪ್ರಕರಣವನ್ನು ಹೀಗೇ ಬಿಟ್ಟರೆ ಸಮಾಜದಲ್ಲಿ ಸಾಕಷ್ಟು ಅಹಿತಕರ ಘಟನೆಗಳು ನಡೆಯಬಹುದೆಂದು ಪೀಠ ಅಭಿಪ್ರಾಯಪಟ್ಟಿತು. ಐವರು ಯುವಕರು ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗುತ್ತಿರುವ ವಿಡಿಯೋ ವಾಟ್ಸ್ ಆ್ಯಪ್ನಲ್ಲಿ ಹರಿದಾಡುತ್ತಿತ್ತು. ಹೈದರಾಬಾದ್ನ ಸುನೀತಾ ಕೃಷ್ಣನ್ ಎಂಬುವರು ಯೂಟ್ಯೂಬ್ನಲ್ಲಿ ವೀಡಿಯೋ
ಅಪ್ಲೋಡ್ ಮಾಡಿದ್ದರು. ಶೇಮ್ ದ ರೇಪಿಸ್ಟ್ ಎಂದು ಹೇಳಿದ್ದರು.