

ಗ್ವಾಲಿಯರ್/ಜಲಂಧರ್: ಮಧ್ಯಪ್ರದೇಶ ಗ್ವಾಲಿಯರ್ ಸಮೀಪ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳು ಹಳಿ ತಪ್ಪಿ ದೇವಸ್ಥಾನಕ್ಕೆ ನುಗ್ಗಿದ ಘಟನೆ ಶನಿವಾರ ನಡೆದಿದೆ.
ಉಳಿದ ಕೋಚ್‌ಗಳ ಜತೆ ಸೇರಿಸಲು ಬರಾವುನಿ ಮೇಲ್ ರೈಲಿನ ಕೆಲವು ಬೋಗಿಗಳನ್ನು ಎಂಜಿನ್‌ವೊಂದು ಎಳೆದೊಯ್ಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಈ ವೇಳೆ ಹಳಿ ತಪ್ಪಿದ ರೈಲಿನ ಕೆಲವು ಕೋಚ್‌ಗಳು ಮರವೊಂದಕ್ಕೆ ಡಿಕ್ಕಿ ಹೊಡೆದಿದೆ.
ನಂತರ ಪಕ್ಕದಲ್ಲೇ ಇದ್ದ ಹನುಮಂತ ದೇವಸ್ಥಾನಕ್ಕೆ ನುಗ್ಗಿದೆ. ಈ ವೇಳೆ ಕೋಚ್‌ನಲ್ಲಿ ಪ್ರಯಾಣಿಕರು ಇಲ್ಲದ ಕಾರಣ ಯಾವುದೇ ಪ್ರಾಣಹಾನಿಯಾಗಿಲ್ಲ.