

ದುಬೈ: 22 ಕ್ಯಾರೆಟ್ ನ ಚಿನ್ನದ ಚೈನ್ ಈಗ ಗಿನ್ನಿಸ್ ದಾಖಲೆಗೆ ಸೇರಿದೆ!
ಗಿನ್ನಿಸ್ ವರ್ಲ್ಡ್ ರೆಕಾರ್ಡ್‌ಗಾಗಿ ಯಾರ್ಯಾರೋ ಏನೋನೋ ಸಾಹಸಗಳನ್ನು ಮಾಡುತ್ತಾರೆ. ಅದರಲ್ಲೂ ದುಬೈನಲ್ಲಿ ಗಿನ್ನಿಸ್ ದಾಖಲೆ ಮಾಡುವುದು ಸಹಜವಾಗಿಬಿಟ್ಟಿದೆ. ಕೇಕ್, ಅತ್ಯಂತ ಭವ್ಯವಾದ ಕಟ್ಟಡಗಳು ಸೇರಿದಂತೆ ಇತರ ಸಾಹಸ ಮತ್ತು ಕ್ರಿಯಾತ್ಮಕತೆಗಳಲ್ಲಿ ಗಿನ್ನಿಸ್ ದಾಖಲೆ ಮಾಡಿದೆ.
ಆದರೆ, ಚಿನ್ನದ ಚೈನ್‌ನಿಂದ ಹೇಗೆ ಗಿನ್ನಿಸ್ ದಾಖಲೆಯಾಗುತ್ತದೆ ಎಂಬ ಪ್ರಶ್ನೆ ಮೂಡಿದ್ದರೆ ಅದಕ್ಕೆ ಇಲ್ಲಿದೆ ಉತ್ತರ.
ದುಬೈನ ಕುಶಲಕರ್ಮಿಗಳು 10 ಅಲ್ಲ, 20 ಅಲ್ಲ, ಬರೋಬ್ಬರಿ 256 ಕೆ.ಜಿ ತೂಕದ ಚಿನ್ನದ ಚೈನ್ ತಯಾರಿಸಿದ್ದು, ಗಿನ್ನಿಸ್ ದಾಖಲೆ ಮಾಡಿದ್ದಾರೆ.
256 ಕೆ.ಜಿ ತೂಕದ ಈ ಚೈನ್‌ನ ಮತ್ತೊಂದು ವಿಶೇಷವೇನೆಂದರೆ ಇದರ ಉದ್ದ 5.5ಕಿ.ಮೀನಷ್ಟಿದೆ. ದಿನಕ್ಕೆ 10 ಗಂಟೆಯಂತೆ 45 ದಿನಗಳಲ್ಲಿ 100 ಕುಶಲಕರ್ಮಿಗಳು ಈ ಚೈನ್ ಸಿದ್ಧಗೊಳಿಸಿದ್ದಾರೆ.
ಈ ಚೈನ್ ಗಿನ್ನಿಸ್ ದಾಖಲೆ ಮಾಡಿದ ಹಿನ್ನಲೆಯಲ್ಲಿ, ದುಬೈನಲ್ಲಿ ಈ ಸರವನ್ನು 'ದುಬೈ ಸೆಲೆಬ್ರೇಷನ್ ಚೈನ್' ಎಂದು ಕರೆಯಲಾಗುತ್ತದೆ.