

ಲಖನೌ: 'ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶಕ್ಕೆ ಬಂದು ಇಲ್ಲಿನ ಶೌಚಾಲಯಗಳನ್ನು ಸ್ವಚ್ಛ ಮಾಡಲಿ'.
ಹೀಗೆಂದು ಹೊಣೆಗೇಡಿತನದ ಹೇಳಿಕೆ ನೀಡಿದ್ದು ಎಸ್ಪಿ ನಾಯಕ ಮುಲಾಯಂ ಸಿಂಗ್ ಯಾದವ್. ಇಂಡಿಯಾ ಗೇಟ್ ಬಳಿ ಪೊರಕೆ ಹಿಡಿದು ಕಸಗುಡಿಸಿದರೆ ಭಾರತ ಶುಚಿಯಾಗುವುದಿಲ್ಲ.
ಪ್ರಧಾನಿ ಕೈಗೊಂಡಿರುವ ಸ್ವಚ್ಛ ಭಾರತ ಅಭಿಯಾನ ಕೇವಲ ಪ್ರಚಾರಕ್ಕಾಗಿ ಎಂದು ಯಾದವ್ ಟೀಕಿಸಿದ್ದಾರೆ.