ಪಿಜ್ಜಾ ಡೆಲಿವರಿ ಬಾಯ್‌ಗೆ ಸಿಕ್ತು ಲಕ್ಷ ರುಪಾಯಿ ಟಿಪ್ಸ್!

ಸಮಯಕ್ಕೆ ಸರಿಯಾಗಿ ಪಿಜ್ಜಾ ತಂದುಕೊಡುವ ಡೆಲಿವರಿ ಬಾಯ್‌ಗೆ ಅಬ್ಬಬ್ಬಾ ಅಂದ್ರೆ ಹತ್ತು...
ಪಿಜ್ಜಾ ಡೆಲಿವರಿ ಬಾಯ್‌ಗೆ ಸಿಕ್ತು ಲಕ್ಷ ರುಪಾಯಿ ಟಿಪ್ಸ್!

ಮಿಚಿಗನ್: ಸಮಯಕ್ಕೆ ಸರಿಯಾಗಿ ಪಿಜ್ಜಾ ತಂದುಕೊಡುವ ಡೆಲಿವರಿ ಬಾಯ್‌ಗೆ ಅಬ್ಬಬ್ಬಾ ಅಂದ್ರೆ ಹತ್ತು, ಇಪ್ಪತ್ತು, ನೂರು, ಸಾವಿರ ರುಪಾಯಿ ಟಿಪ್ಸ್ ಸಿಗಬಹುದು. ಆದರೆ, ಇಲ್ಲೊಬ್ಬ ಡೆಲಿವರಿ ಬಾಯ್‌ಗೆ ಸಿಕ್ಕಿದ್ದು ಲಕ್ಷ ಮೊತ್ತದ ಟಿಪ್ಸ್.

ಸರಿಯಾದ ಸಮಯಕ್ಕೆ ಪಿಜ್ಜಾ ತಂದುಕೊಟ್ಟ ಡೆಲಿವರಿ ಬಾಯ್‌ಗೆ ಬರೋಬ್ಬರಿ 2084 ಡಾಲರ್(ಸುಮಾರು 1.25 ಲಕ್ಷ ರು.) ಟಿಪ್ಸ್ ದೊರಕಿದೆ.

ಅಮೆರಿಕದ ಮಿಚಿಗನ್ ನಗರದ ಆನ್ ಆರ್ಬರ್ ಪಿಜ್ಜಾ ಹೌಸ್‌ನಲ್ಲಿ ಡೆಲಿವರಿ ಬಾಯ್ ಆಗಿ ರೋಬ್ ಕೆಲಸ ಮಾಡುತ್ತಿದ್ದನು. ಕೆಲ್ಲರ್ ವಿಲಿಯಮ್ಸ್ ರಿಯಾಲ್ಟಿ ಎಂಬ ಕಂಪೆನಿಯು ಈ ಪಿಜ್ಜಾ ಹೌಸ್‌ಗೆ ಕರೆ ಮಾಡಿ ಪ್ರಾದೇಶಿಕ ಸಭೆಗಾಗಿ ಪಿಜ್ಜಾ ಆರ್ಡರ್ ಮಾಡಿತ್ತು. ಡೆಲಿವರಿ ಬಾಯ ರೋಬ್ ಸರಿಯಾದ ಸಮಯಕ್ಕೆ ಆರ್ಡರ್ ಪ್ಲೇಸ್ ಮಾಡಿದ್ದ.

ಇದರಿಂದ ಖುಷಿಯಾದ ಕಂಪನಿಯ ಉದ್ಯೋಗಿ ಸ್ಪೇಪಿ ಮೆಕ್ವೆ ಎಂಬುವರು ಡೆಲಿವರಿ ಬಾಯ್‌ಗೆ ಈ ದೊಡ್ಡ ಮೊತ್ತದ ಟಿಪ್ಸ್ ಕೊಟ್ಟಿದ್ದಾರೆ. ಇದರಿಂದ ಖುಷಿಯಾಗಿರುವ ರೋಬ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com