ರಾಷ್ಟ್ರರಾಜಧಾನಿ ಈಗ ಅಭೇದ್ಯ ಕೋಟೆ

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮರನ್ನು ಗಣರಾಜ್ಯೋತ್ಸವದ ಅತಿಥಿಯಾಗಿ ಆಹ್ವಾನಿಸಿರುವ ಕೇಂದ್ರ ಸರ್ಕಾರ...
ನವದೆಹಲಿಯ ರಾಜಪಥದಲ್ಲಿ ಗಸ್ತು ತಿರುಗುತ್ತಿರುವ ಪೊಲೀಸ್ ಸಿಬ್ಬಂದಿಗಳು (ಸಂಗ್ರಹ ಚಿತ್ರ)
ನವದೆಹಲಿಯ ರಾಜಪಥದಲ್ಲಿ ಗಸ್ತು ತಿರುಗುತ್ತಿರುವ ಪೊಲೀಸ್ ಸಿಬ್ಬಂದಿಗಳು (ಸಂಗ್ರಹ ಚಿತ್ರ)
Updated on: 

ನವದೆಹಲಿ: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮರನ್ನು ಗಣರಾಜ್ಯೋತ್ಸವದ ಅತಿಥಿಯಾಗಿ ಆಹ್ವಾನಿಸಿರುವ ಕೇಂದ್ರ ಸರ್ಕಾರ ಅವರ ಸುರಕ್ಷೆಗಾಗಿ ಹಿಂದೆಂದೂ ಕಂಡರಿಯದಂತಹ ಭದ್ರತೆಯನ್ನು ಕಲ್ಪಿಸಿದೆ.

ಗಣರಾಜ್ಯೋತ್ಸವ ಪರೇಡ್ ನಡೆಯಲಿರುವ ರಾಜ್‌ಪಥ್‌ನಲ್ಲಿ ವಿವಿಐಪಿಗಳು ಕುಳಿತುಕೊಳ್ಳುವ ಆವರಣದ ಸುತ್ತಲೂ 7 ಹಂತದ ಭದ್ರತಾ ವಲಯವನ್ನು ರಚಿಸಲಾಗಿದೆ. ವಿಶೇಷವಾಗಿ ರಚಿಸಲಾಗಿರುವ ರೇಡಾರ್ ಅಲ್ಲಿನ ವಾಯು ಪ್ರದೇಶದ ಮೇಲೆ ಕಣ್ಣಿಡಲಿದೆ. ಒಟ್ಟಾರೆ ಒಬಾಮ ಆಗಮನದ ಹಿನ್ನೆಲೆಯಲ್ಲಿ ಇಡೀ ರಾಜಧಾನಿಯೇ ಅಭೇದ್ಯ ಕೋಟೆಯಾಗಿ ಮಾರ್ಪಾಟ್ಟಿದೆ.

ಬಹು ಏಜೆನ್ಸಿ ನಿಯಂತ್ರಣ ಕೊಠಡಿ
ರಾಜಧಾನಿಯ ಎಲ್ಲ ಪ್ರದೇಶಗಳ ನಿಗಾ ಕಾರ್ಯಾಚರಣೆಯ ಎಲ್ಲ ಪ್ರದೇಶಗಳ ನಿಗಾ ಕಾರ್ಯಾಚರಣೆಯ ಮೇಲೆ ಬಹು-ಏಜೆನ್ಸಿ ನಿಯಂತ್ರಣ ಕೊಠಡಿಗಳು ಕಣ್ಣಿಡಲಿದೆ. ಗಣರಾಜ್ಯೋತ್ಸವ ಕಾರ್ಯಕ್ರಮದ ವೇಳೆ ಉಗ್ರರು ದಾಳಿ ನಡೆಸುವ ಭೀತಿಯಿದ್ದರೂ, ಈ ಬಗ್ಗೆ ಗುಪ್ತಚರ ಇಲಾಖೆಯಿಂದ ಯಾವುದೇ ನಿರ್ದಿಷ್ಟ ಮಾಹಿತಿ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜಧಾನಿ ಮತ್ತು ಆಗ್ರಾಗೆ ಈಗಾಗಲೇ ಆಗಮಿಸಿರುವ ಅಮೆರಿಕದ ರಹಸ್ಯ ಸೇವಾ ಸಿಬ್ಬಂದಿ ಒಬಾಮ ಅವರು ಸಂಚರಿಸುವ ಎಲ್ಲ ಮಾರ್ಗಗಳ ಪ್ರಾಥಮಿಕ ಸಮೀಕ್ಷೆ ನಡೆಸಿದ್ದಾರೆ. ಕೇಂದ್ರ ಭದ್ರತಾ ಸಂಸ್ಥೆಗಳು ತನ್ನ ಕ್ಯಾಟ್ ಪಡೆಯನ್ನು ರಾಜಧಾನಿಗೆ ಕರೆಸಿಕೊಂಡಿದ್ದು, ಈ ಪಡೆಯು ಹೊಟೆಲ್‌ಗಳು, ಅತಿಥಿ ಗೃಹಗಳು, ಸೂಕ್ಷ್ಮ ಪ್ರದೇಶಗಳಿಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸುತ್ತಿದ್ದಾರೆ. ಒಬಾಮ ಅವರು ತಂಗಲಿರುವ ಐಟಿಸಿ ಮೌರ್ಯ ಹೊಟೆಲ್ ಅನ್ನು ಅಮೆರಿಕ ರಹಸ್ಯ ಸೇವಾ ಸಿಬ್ಬಂದಿ ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಜತಗೆ ಅಲ್ಲೂ ಬಹು ತರಂಗೀಯ ನಿಯಂತ್ರಣಾ ಕೊಠಡಿಗಳನ್ನು ರಟಿಸಲಾಗಿದೆ. ರಾಜಧಾನಿಯಲ್ಲಿ ಅಳವಡಿಸಲಾಗಿರುವ 15 ಸಾವಿರ ಸಿಸಿಟಿವಿಗಳ ದೃಶ್ಯಗಳನ್ನು ಇದೇ ಕೊಠಡಿಯಲ್ಲಿ ವೀಕ್ಷಿಸಲಾಗುತ್ತದೆ.

ಹೆಚ್ಚುವರಿ ಸಿಬ್ಬಂದಿ

80 ಸಾವಿರ ಮಂದಿ ದೆಹಲಿ ಪೊಲೀಸರಲ್ಲದೆ, ಹೆಚ್ಚುವರಿ 20 ಸಾವಿರ ಅರೆಸೇನಾ ಪಡೆ ಸಿಬ್ಬಂದಿ, ಹರ್ಯಾಣ, ರಾಜಸ್ಥಾನದಿಂದ ಕರೆಸಿಕೊಂಡಿರುವ ಸಶಸ್ತ್ರ ಪೊಲೀಸ್ ಪಡೆ, ಭಾರತೀಯ ಮೀಸಲು ಪಡೆ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ಪ್ರತಿಯೊಂದು ಭದ್ರತಾ ಡ್ರಿಲ್‌ನಲ್ಲೂ ಅಮೆರಿಕದ ಅಧಿಕಾರಿಗಳು ಪಾಲ್ಗೊಳ್ಳಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com