

ವಾಷಿಂಗ್ಟನ್: ಇಸ್ಲಾಮಿಕ್ ಸ್ಟೇಟ್ ಆಫ್ ಇರಾನ್, ಸಿರಿಯಾ(ಇಸಿಸ್) ಇಂದು ಜಗತ್ತಿಗೆ ದೊಡ್ಡ ಶತ್ರುವಾಗಿದೆ. ಹೀಗಾಗಿ ಇಸಿಸ್ ನಾಶವೇ ನಮ್ಮ ಗುರಿ ಎಂದು ಅಧ್ಯಕ್ಷ ಬರಾಕ್ ಒಬಾಮಾ ಭಯೋತ್ಪಾದನೆ ವಿರುದ್ಧ ಗುಡುಗಿದ್ದಾರೆ.
ಅಮೆರಿಕ ಸಂಯುಕ್ತ ಸಂಸ್ಥಾನದ 6ನೇ ವಾರ್ಷಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಒಬಾಮ, ಜಗತ್ತಿಗೆ ಕಂಟಕವಾಗಿರುವ ಇಸಿಸ್‌ನ್ನು ಬುಡಸಮೇತ ಕಿತ್ತು ಹಾಕಬೇಕಿದೆ. ಮೊದಲು ಇಸಿಸ್ ಸಂಪರ್ಕವನ್ನು ನಾಶ ಮಾಡಬೇಕು ಆಗ ಮಾತ್ರ ಇಸಿಸ್‌ನ್ನು ಸಂಪೂರ್ಣವಾಗಿ ನಾಶ ಮಾಡಲು ಸಾಧ್ಯ. ಹೀಗಾಗಿ ಇಸಿಸ್ ನಿರ್ಮಾಮವೇ ಅಮೆರಿಕದ ಮುಂದಿನ ಗುರಿ ಎಂದರು.
ಇದೇ ವೇಳೆ ದೇಶದ ಆರ್ಥಿಕ ಸ್ಥಿತಿ ಸುಧಾರಿಸುವತ್ತ ಮತ್ತಷ್ಟು ದೃಡ ಹೆಜ್ಜೆಗಳನ್ನು ಇಡಬೇಕಾದ ಅವಶ್ಯಕತೆ ಇದೆ. ನಿರುದ್ಯೋಗ ಸಮಸ್ಯೆ ನಿವಾರಿಸಲು ರಚನಾತ್ಮಕ ಯೋಜನೆಗಳನ್ನು ಪ್ರಕಟಿಸಿದ ಒಬಾಮ, ಅಮೆರಿಕದಲ್ಲಿ ನಿರುದ್ಯೋಗ ಸಮಸ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಅಲ್ಲದೆ ಅಮೆರಿಕ ಇಂಧನ ಸ್ವಾವಲಂಬಿ ರಾಷ್ಟ್ರವಾಗುತ್ತಿದೆ. ಇಂಧನಕ್ಕಾಗಿ ಇತರ ದೇಶಗಳನ್ನು ಅವಲಂಬಿಸುವುದು ಕಡಿಮೆಯಾಗಿದೆ ಎಂದರು.
ಬರಾಕ್ ಒಬಾಮ ಭಾರತ ಭೇಟಿಗೆ ಕ್ಷಣಗಣನೆ ಆರಂಭವಾಗಿದೆ. ಈ ಐತಿಹಾಸಿಕ ಕ್ಷಣಕ್ಕೆ ಭಾರತ ಕೂಡ ಭರ್ಜರಿ ತಯಾರಿ ಮಾಡಿಕೊಂಡಿದೆ.