ಆಮ್‌ ಆದ್ಮಿ ಚುನಾವಣಾ ಪ್ರಣಾಳಿಕೆ ಬಿಡುಗಡೆ

ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಆಮ್ ಆದ್ಮಿ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು..
ಆಮ್ ಆದ್ಮಿ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಅರವಿಂದ್ ಕೇಜ್ರಿವಾಲ್ (ಸಂಗ್ರಹ ಚಿತ್ರ)
ಆಮ್ ಆದ್ಮಿ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಅರವಿಂದ್ ಕೇಜ್ರಿವಾಲ್ (ಸಂಗ್ರಹ ಚಿತ್ರ)
Updated on: 

ನವದೆಹಲಿ: ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಆಮ್ ಆದ್ಮಿ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ದೆಹಲಿಯನ್ನು ವಿಶ್ವ ಪ್ರಸಿದ್ಧ ನಗರಿಯನ್ನಾಗಿ ಮಾಡುವುದಾಗಿ ಆಪ್ ಹೇಳಿದೆ.

ದೆಹಲಿ ವಿಧಾನಸಭೆ ಚುನಾವಣೆಗಾಗಿ ತಾನು ಪ್ರಣಾಳಿಕೆಯನ್ನು ಬಿಡುಗಡೆ ಮಾಡುವುದಿಲ್ಲ. ತಾನು ಮುನ್ನೋಟದ ದಾಖಲೆ ಪತ್ರ ಮಂಡನೆ ಮಾತ್ರ ಮಾಡುತ್ತೇನೆ ಎಂದು ಬಿಜೆಪಿ ಹೇಳಿಕೊಂಡ ಸಂದರ್ಭದಲ್ಲಿಯೇ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯಲ್ಲಿ ಇಂದು ತಮ್ಮ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ಸಂವಾದದ ಮೂಲಕ ಕಲೆ ಹಾಕಲಾಗಿರುವ ಆಶ್ವಾಸನೆಗಳ ಪ್ರಕಾರ ಆಮ್‌ ಆದ್ಮಿ ಪಕ್ಷ ದೆಹಲಿ 8 ಲಕ್ಷ ಹೊಸ ಉದ್ಯೋಗಗಳ ಸೃಷ್ಟಿ, 30,000 ಹಾಸಿಗೆ ಸಾಮರ್ಥ್ಯವುಳ್ಳ ಆಸ್ಪತ್ರೆಗಳ ನಿರ್ಮಾಣ, 20 ಹೊಸ ಕಾಲೇಜುಗಳ ಸ್ಥಾಪನೆ, ಎಲ್ಲ ಅರ್ಹ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ, ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಮತ್ತು ವೈಫೈ ಸೌಕರ್ಯ, ಅರ್ಧದಷ್ಟು ವಿದ್ಯುತ್‌ ಬಿಲ್‌ ಕಡಿತ ಮತ್ತು ಉಚಿತ ಜೀವನಾಧಾರ ನೀರು ಪೂರೈಕೆ ಇತ್ಯಾದಿ ಸೇವೆಗಳನ್ನು ದೆಹಲಿ ನಿವಾಸಿಗಳಿಗೆ ನೀಡುವುದಾಗಿ ಹೇಳಿಕೊಂಡಿದೆ.

ಈ ಪ್ರಣಾಳಿಕೆಯನ್ನು ಸಿದ್ಧಪಡಿಸುವಾಗ ತಾನು ವೃತ್ತಿಪರರು, ಹೆಂಗಸರು, ವಿದ್ಯಾರ್ಥಿಗಳು, ಯುವ ಸಮುದಾಯ, ಮಹಿಳೆಯರು, ಗ್ರಾಮಸ್ಥರು, ಕೈಗಾರಿಕೋದ್ಯಮಿಗಳು, ಅನಧಿಕೃತ ಕಾಲನಿಗಳ ನಿವಾಸಿಗಳು - ಹೀಗೆ ವಿವಿಧ ವರ್ಗಗಳ ಜನರನ್ನು ಸಂಪರ್ಕಿಸಿ, ಅವರೊಂದಿಗೆ ಸಂವಾದ ಮಾಡಿದ್ದು, ಅದರ ಅನ್ವಯವೇ ಪ್ರಣಾಳಿಕೆಯನ್ನು ಸಿದ್ಧಪಡಿಸಿರುವುದಾಗಿ ಆಪ್‌ ಹೇಳಿದೆ.

70 ಅಂಶಗಳ ಪ್ರಣಾಳಿಕೆ
ಆಪ್ ಪ್ರಣಾಳಿಕೆಯು ಮಹಿಳೆಯರ ರಕ್ಷಣೆ, ಹಿರಿಯರು ಹಾಗೂ ಯುವಕರ ಕಲ್ಯಾಣ, ಬಡಾವಣೆಗಳ ಅಭಿವೃದ್ಧಿ, ವಕೀಲರು ಹಾಗೂ ಕೆಲಸಗಾರರ ಕಲ್ಯಾಣ, ಸಾಮಾನ್ಯ ಗೃಹ ಸೌಲಭ್ಯ, ರೈತರು ಮತ್ತು ಇತರ ಸಮಸ್ಯೆಗಳ ಕುರಿತು ಪ್ರಣಾಳಿಕೆಯಲ್ಲಿ ಪ್ರಾಮುಖ್ಯತೆ ನೀಡಲಾಗಿದೆ. ನವದೆಹಲಿಯನ್ನು ಪ್ರವಾಸೋದ್ಯಮ, ವ್ಯಾಪಾರ ಹಾಗೂ ಸೇವೆಗಳ ಕೇಂದ್ರವಾಗಿ ಮಾಡುವುದಾಗಿ ಕೇಜ್ರಿವಾಲ್ ತಿಳಿಸಿದ್ದಾರೆ.

ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಪ್ರಣಾಳಿಕೆಯಲ್ಲಿ ಎಂದಿಗೂ ಸಾಮಾನ್ಯರ ನೈಜ ಅಗತ್ಯಗಳ ಕುರಿತು ಲಕ್ಷ್ಯ ವಹಿಸಿಲ್ಲ ಎಂದು ಕೇಜ್ರಿವಾಲ್ ಇದೇ ವೇಳೆ ಆರೋಪಿಸಿದರು. ಅಲ್ಲದೆ, ಬಿಜೆಪಿಗೆ ತಾನು ಸಿದ್ಧಪಡಿಸುವ ಪ್ರಣಾಳಿಕೆಯು ಜನರ ಬೇಡಿಕೆಗೆ ತಕ್ಕಂತೆ ಇರುವ ಕುರಿತು ನಂಬಿಕೆ ಇಲ್ಲ. ಆದ್ದರಿಂದಲೇ ಬಿಡುಗಡೆ ಮಾಡುವ ಧೈರ್ಯ ತೋರುತ್ತಿಲ್ಲ ಎಂದು ಅವರು ವ್ಯಂಗ್ಯವಾಡಿದರು.

ಆಪ್ ಪ್ರಣಾಳಿಕೆಯ ಪ್ರಮುಖ ಅಂಶಗಳು ಈರೀತಿ ಇವೆ.
ದೆಹಲಿಯಲ್ಲಿ ಜನ ಲೋಕಪಾಲ ಕಾಯಿದೆ ಜಾರಿಗೆ ಕ್ರಮ, ಜನರಿಗೆ ನೇರವಾಗಿ ಆಡಳಿತಾಧಿಕಾರ ನೀಡಲು 'ಸ್ವರಾಜ್ ಕಾಯಿದೆ' ಜಾರಿ, ವಿದ್ಯುತ್ ಬಿಲ್ ದರ ಅರ್ಧಕ್ಕಿಂತ ಕಡಿತ, ಪ್ರತಿ ಮನೆಗೆ ತಿಂಗಳಿಗೆ 20 ಸಾವಿರ ಲೀ. ಉಚಿತ ನೀರು ಪೂರೈಕೆ, ಸಿಎಜಿಯಿಂದ DISCOMS ನ ಸಮಗ್ರ ಆಡಿಟ್, ಪ್ರತ್ಯೇಕ ವಿದ್ಯುತ್ ಉತ್ಪಾದನೆ ಕೇಂದ್ರ ಸ್ಥಾಪನೆ, ಸಂಪೂರ್ಣ ರಾಜ್ಯತ್ವಕ್ಕಾಗಿ ಹೋರಾಟ, ನವೀಕರಿಸಬಹುದಾದ ಮತ್ತು ಪರ್ಯಾಯ ಇಂಧನ ಮೂಲವಾದ ಸೋಲಾರ್ ವಿದ್ಯುತ್ ಉಪಯೋಗಕ್ಕೆ ಒತ್ತು, ಯಮುನಾ ನದಿ ಸ್ವಚ್ಛತೆ, ಕೈಗೆಟುಕುವ ದರದಲ್ಲಿ ಸ್ವಚ್ಛ ಕುಡಿಯುವ ನೀರು ಪೂರೈಕೆ, ವೈ ಫೈ ಸೌಲಭ್ಯ, ಮಹಿಳೆಯರ ರಕ್ಷಣೆಗಾಗಿ ನಗರದಾದ್ಯಂತ ಸಿಸಿಟಿವಿ ಕ್ಯಾಮರಾ, ನಿವೃತ್ತಿ ನಂತರದ ಯೋಜನೆಗೆ ಒತ್ತು, ಕೈಗೆಟುಕುವ ವೆಚ್ಚದಲ್ಲಿ ಶಿಕ್ಷಣ ಸೌಲಭ್ಯ, ನವದೆಹಲಿಯನ್ನು ಪ್ರವಾಸಿ, ಶಿಕ್ಷಣ, ವ್ಯಾಪಾರ ಮತ್ತು ಸೇವಾ ಹಬ್ ಮಾಡಲು ಯತ್ನ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com