ವ್ಯಾಪಂ ಪರೀಕ್ಷಾ ಹಗರಣ ಪತ್ರಕರ್ತ ದಿಢೀರ್ ಸಾವು

ಮಧ್ಯಪ್ರದೇಶ ವೃತ್ತಿಪರ ಶಿಕ್ಷಣ ಮಂಡಳಿ (ವ್ಯಾಪಂ) ನೇಮಕಾತಿ ಹಗರಣವನ್ನು ಸುತ್ತಿಕೊಂಡಿರುವ ಅನುಮಾನಾಸ್ಪದ ಸಾವಿನ ಸರಣಿ ನಿಲ್ಲುವಂತೆ ಕಾಣುತ್ತಿಲ್ಲ. ಹಗರಣದ ಆರೋಪಿಗಳಿಬ್ಬರು ವಾರದ ಹಿಂದೆ ಸಾವಿಗೀಡಾದ ಬೆನ್ನಲ್ಲೇ ಈಗ ವ್ಯಾಪಂ...
ವ್ಯಾಪಂ ಪರೀಕ್ಷಾ ಹಗರಣ ಪತ್ರಕರ್ತ ದಿಢೀರ್ ಸಾವು (ಸಾಂದರ್ಭಿಕ ಚಿತ್ರ)
ವ್ಯಾಪಂ ಪರೀಕ್ಷಾ ಹಗರಣ ಪತ್ರಕರ್ತ ದಿಢೀರ್ ಸಾವು (ಸಾಂದರ್ಭಿಕ ಚಿತ್ರ)
Updated on: 

ಜುಬುವಾ: ಮಧ್ಯಪ್ರದೇಶ ವೃತ್ತಿಪರ ಶಿಕ್ಷಣ ಮಂಡಳಿ (ವ್ಯಾಪಂ) ನೇಮಕಾತಿ ಹಗರಣವನ್ನು ಸುತ್ತಿಕೊಂಡಿರುವ ಅನುಮಾನಾಸ್ಪದ ಸಾವಿನ ಸರಣಿ ನಿಲ್ಲುವಂತೆ ಕಾಣುತ್ತಿಲ್ಲ. ಹಗರಣದ ಆರೋಪಿಗಳಿಬ್ಬರು ವಾರದ ಹಿಂದೆ ಸಾವಿಗೀಡಾದ ಬೆನ್ನಲ್ಲೇ ಈಗ ವ್ಯಾಪಂ ಕುರಿತು ವರದಿ ಮಾಡುತ್ತಿದ್ದ ಪತ್ರಕರ್ತರೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಆದರೆ ಪೊಲೀಸರ ಪ್ರಕಾರ ಇವರು ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.

ಅಕ್ಷಯ್ ಸಿಂಗ್ ಮೃತ ಪತ್ರಕರ್ತ ಹಗರಣದಲ್ಲಿ ಹೆಸರು ಕಾಣಿಸಿಕೊಂಡ ಬಳಿಕ ರೈಲ್ವೆ ಹಳಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಯುವತಿ ನಮ್ರತಾಳ ಪೋಷಕರನ್ನು ಸಂದರ್ಶನ ಮಾಡಿದ ಬಳಿಕ ಅಕ್ಷಯ್ ಸಿಂಗ್ ಅಸ್ವಸ್ಥಗೊಂಡಿದ್ದರು.

``ಅಕ್ಷಯ್ ಹಾಗೂ ಮತ್ತಿಬ್ಬರು ಶನಿವಾರ ಮಧ್ಯಾಹ್ನ ನಮ್ಮ ಮನೆಗೆ ಬಂದಿದ್ದರು. ಸಂದರ್ಶನ ಮುಗಿಸಿದ ಬಳಿಕ ಒಬ್ಬನನ್ನು ದಾಖಲೆಗಳ ಫೋಟೋ ಕಾಪಿ ತೆಗೆಸಲು ಕಳುಹಿಸಿಕೊಟ್ಟಿದ್ದರು.
ಈ ವೇಳೆ ಅಕ್ಷಯ್ ಮನೆ ಹೊರಗೆಯೇ ಆತನಿಗಾಗಿ ಕಾಯುತ್ತಾ ನಿಂತಿದ್ದರು. ಆಗ ಏಕಾಏಕಿ ಅಸ್ವಸ್ಥಗೊಂಡ ಅಕ್ಷಯ್ ಬಾಯಲ್ಲಿ ನೊರೆ ಕಾಣಿಸಿಕೊಂಡಿದೆ.

ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಗುಜರಾತ್‍ನ ದಹೂದ್‍ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಅಕ್ಷಯ್ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಎಂದು ನಮ್ರತಾ ತಂದೆ ಮೆಹ್ತಾಬ್ ಸಿಂಗ್ ದಮೋರ್ ಹೇಳಿದ್ದಾರೆ.

ಅಕ್ಷಯ್ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ವ್ಯಾಪಂ ನೇಮಕಾತಿ ಹಗರಣವು ದೇಶದಲ್ಲೇ ಅತಿದೊಡ್ಡ ಹಗರಣವಾಗಿದೆ. ಈ ರು.2 ಸಾವಿರ ಕೋಟಿ ಹಗರಣದಲ್ಲಿ ಮಾಜಿ ಸಚಿವರು, ರಾಜಕಾರಣಿಗಳು, ಉದ್ಯಮಿಗಳು, ಅಧಿಕಾರಿಗಳು ಸೇರಿ 2 ಸಾವಿರಕ್ಕೂ ಹೆಚ್ಚು ಮಂದಿಯನ್ನು ಈವರೆಗೆ ಬಂಧಿಸಲಾಗಿದೆ. 2013ರಲ್ಲಿ ಹಗರಣ ಬಯಲಾಗುತ್ತಿದ್ದಂತೆ ಅಕ್ರಮದಲ್ಲಿ ಹೆಸರು ಕೇಳಿಬಂದ, ಇದರ ಜತೆಗೆ ತಳಕು ಹಾಕಿಕೊಂಡ 26 ಮಂದಿ ಸಾವಿಗೀಡಾಗಿದ್ದಾರೆ. ಆದರೆ, ಮೂಲಗಳು ಈ ಸಂಖ್ಯೆ 40 ದಾಟಿದೆ ಎನ್ನುತ್ತವೆ. ಇವರಲ್ಲಿ ಹಲವರ ಸಾವು ಅನುಮಾನಾಸ್ಪದ ಹುಟ್ಟಿಸುವಂತಿದೆ.

ವ್ಯಾಪಂ ವರದಿಗೆಂದೇ ಬಂದಿದ್ದರು!
ಆಜ್ ತಕ್ ವಾಹಿನಿಗಾಗಿ ಹಗರಣದ ಕುರಿತು ವರದಿ ಮಾಡಲೆಂದೇ ಮೂರು ದಿನಗಳ ಹಿಂದೆ ಅಕ್ಷಯ್ ದೆಹಲಿಯಿಂದ ಬಂದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com