5 ವರ್ಷದ ಕಂದಮ್ಮನಿಗೆ ಲೈಂಗಿಕ ಕಿರುಕುಳ: ಪಿಜ್ಜಾ ಡೆಲಿವರಿ ಬಾಯ್ ಅರೆಸ್ಟ್

ಡಾಮಿನೊಸ್ ಪಿಜ್ಜಾ ಡೆಲಿವೆರಿ ನೀಡಲು ಬಂದಿದ್ದ ಡೆಲಿವೆರಿ ಬಾಯ್ ಐದು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಕಾರಣಕ್ಕೆ ದೆಹಲಿ ಪೊಲೀಸರು ಬಂಧಿಸಿದ್ದಾರೆ...
ಲೈಂಗಿಕ ಕಿರುರುಳ (ಸಾಂದರ್ಭಿಕ ಚಿತ್ರ)
ಲೈಂಗಿಕ ಕಿರುರುಳ (ಸಾಂದರ್ಭಿಕ ಚಿತ್ರ)
Updated on: 

ನವದೆಹಲಿ: ಡಾಮಿನೊಸ್ ಪಿಜ್ಜಾ ಡೆಲಿವೆರಿ ನೀಡಲು ಬಂದಿದ್ದ ಡೆಲಿವೆರಿ ಬಾಯ್ ಐದು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಕಾರಣಕ್ಕೆ ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಬೆಳಗ್ಗೆ 11.45ರ ಸುಮಾರಿಗೆ ದಕ್ಷಿಣ ದೆಹಲಿಯಲ್ಲಿರುವ ಬಾಲಕಿ ಮನೆಗೆ ಪಿಜ್ಜಾ ಡೆಲಿವೆರಿ ನೀಡಲು ಹೋಗಿದ್ದ ಅಮೀತ್ ಎಂಬಾತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದು, ಆತನನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಮೂರನೇ ಮಹಡಿಯಲ್ಲಿ ಪಿಜ್ಜಾ ಡೆಲಿವೆರಿ ಕೊಟ್ಟ ಕೆಳಗಿಳಿಯುತ್ತಿದ್ದ ಡೆಲಿವೆರಿ ಬಾಯ್ ಕೆಳ ಹಂತದ ಮಹಡಿಯ ಮೇಲೆ ಬಾಲಕಿ ಆಡುತ್ತಿರುವುದನ್ನು ಗಮನಿಸಿ ಬಾಲ್ಕನಿಯಲ್ಲಿದ್ದ ದ್ವೀಪವನ್ನು ಆರಿಸಿ ಬಾಲಕಿಗೆ ಲೈಂಕಿಗ ಕಿರುಕುಳ ನೀಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ನೋವಿನಿಂದ ಬಾಲಕಿ ಕಿರುಚಿಕೊಂಡ ಕೂಡಲೇ ಅಮಿತ್ ಅಲ್ಲಿಂದ ಪರಾರಿಯಾಗಿದ್ದಾನೆ ಮನೆಗೆ ಬಂದ ಬಾಲಕಿ ತನ್ನ ತಾಯಿ ಬಳಿ ನಡೆದದ್ದನ್ನು ವಿವರಿಸಿದ್ದಾಳೆ. ಬಳಿಕ ಪೋಷಕರು ಡಾಮಿನೊಸ್ ಅಂಗಡಿಗೆ ಹೋಗಿ ಡೆಲಿವೆರಿ ಬಾಯ್ ವಿರುದ್ಧ ದೂರಿದ್ದಾರೆ. ನಂತರ ಡಾಮಿನೊಸ್ ನ ವ್ಯವಸ್ಥಾಪಕರು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಬಂದ ಬಳಿಕ ಪೋಷಕರು ದೂರು ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com