

ನವದೆಹಲಿ: `ಸಮಾನ ಹುದ್ದೆ, ಸಮಾನ ಪಿಂಚಣಿ' ಜಾರಿಗಾಗಿ ನಿವೃತ್ತ ಯೋಧರ ಹೋರಾಟ ಮುಂದುವರಿದಿರುವ ನಡುವೆಯೇ ಕೇಂದ್ರ ಸರ್ಕಾರ, ಹೈಕೋರ್ಟ್ ನ್ಯಾಯಮೂರ್ತಿಗಳಿಗೆ `ಸಮಾನ ಹುದ್ದೆ, ಸಮಾನ ಪಿಂಚಣಿ' ನೀಡುವ ಬಗ್ಗೆ ಚಿಂತನೆ ನಡೆಸುತ್ತಿದೆ.
ಈ ಬಗೆಗಿನ ಕಾನೂನಿಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ. ಬಾರ್ ಕೌನ್ಸಿಲ್‍ನಿಂದ ನೇಮಕ ಗೊಂಡ ಹೈಕೋರ್ಟ್ ನ್ಯಾಯಮೂರ್ತಿಗಳು ರಾಜ್ಯ ನ್ಯಾಯಾಂಗ ಸೇವೆಯಿಂದ ಬಂದ ನ್ಯಾಯಮೂರ್ತಿಗಳಿ ಗಿಂತ ಕಡಿಮೆ ಪಿಂಚಣಿ ಪಡೆಯುತ್ತಿದ್ದಾರೆ. ಈ ತಾರತಮ್ಯ ನಿವಾರಿಸುವ ನಿಟ್ಟಿನಲ್ಲಿ ಸರ್ಕಾರವು, ಹೈಕೋರ್ಟ್ ಜಡ್ಜ್‍ಗಳ ವೇತನ ಮತ್ತು ಸೇವೆಗೆ ಸಂಬಂಧಿಸಿದ ಕಾನೂನಿಗೆ ತಿದ್ದುಪಡಿ ತರಲು ಚಿಂತನೆ ನಡೆಸಿದೆ.
ನಿವೃತ್ತ ಯೋಧರ ರ್ಯಾಲಿ: 30 ದಿನ ಗಳ ನಿರಶನ ನಡೆಸಿದರೂ ಸರ್ಕಾರ `ಸಮಾನ ಹುದ್ದೆ, ಸಮಾನ ಪಿಂಚಣಿ' ಜಾರಿ ಮಾಡದ ಹಿನ್ನೆಲೆಯಲ್ಲಿ ಆಗ ಸ್ಟಲ್ಲಿ ಬಿಹಾರದಲ್ಲಿ ರ್ಯಾಲಿ ನಡೆಸಲು ನಿವೃತ್ತ ಯೋಧರು ತೀರ್ಮಾನಿಸಿದ್ದಾರೆ. ಸದ್ಯದಲ್ಲೇ ಚುನಾವಣೆ ಎದುರಿಸಲಿರುವ ಬಿಹಾರದಲ್ಲಿ ರ್ಯಾಲಿ ನಡೆಸಲಿದ್ದು, ಸರ್ಕಾರ ನಮಗೆ ನೀಡಿದ ಸುಳ್ಳು ಆಶ್ವಾಸನೆಯನ್ನು ಜನರ ಮುಂದಿಡಲಿದ್ದೇವೆ. ಎಂದೂ ಯೋಧರು ತಿಳಿಸಿದ್ದಾರೆ.