ಕೇಜ್ರಿವಾಲ್ ವಿರುದ್ಧ ಜಾಹಿರಾತು ಅರ್ಜಿ: ಕೇಂದ್ರವನ್ನು ಪ್ರಶ್ನಿಸಿದ ಹೈಕೋರ್ಟ್

ರಾಜಕೀಯ ಜಾಹೀರಾತುಗಳಿಗೆ ನಿಷೇಧಿಸಿರುವ ಸುಪ್ರೀಂಕೋರ್ಟ್, ತನ್ನ ನಿರ್ದೇಶನದ ಕುರಿತಂತೆ ಯಾವ ರೀತಿಯ ಕ್ರಮಗಳನ್ನು ಕೈಗೊಂಡಿದೆ ಎಂದು ದೆಹಲಿ ಹೈ ಕೋರ್ಟ್ ಬುಧವಾರ ಸುಪ್ರಿಂಕೋರ್ಟ್ ನ್ನು ಪ್ರಶ್ನಿಸಿದೆ...
ದೆಹಲಿ ಸರ್ಕಾರದ ಜಾಹೀರಾತು
ದೆಹಲಿ ಸರ್ಕಾರದ ಜಾಹೀರಾತು
Updated on: 

ನವದೆಹಲಿ: ರಾಜಕೀಯ ಜಾಹೀರಾತುಗಳಿಗೆ ನಿಷೇಧಿಸಿರುವ ಸುಪ್ರೀಂಕೋರ್ಟ್, ತನ್ನ ನಿರ್ದೇಶನದ ಕುರಿತಂತೆ ಯಾವ ರೀತಿಯ ಕ್ರಮಗಳನ್ನು ಕೈಗೊಂಡಿದೆ ಎಂದು ದೆಹಲಿ ಹೈ ಕೋರ್ಟ್ ಬುಧವಾರ ಸುಪ್ರಿಂಕೋರ್ಟ್ ನ್ನು ಪ್ರಶ್ನಿಸಿದೆ.

ದೆಹಲಿಯಲ್ಲಿ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷದ ಕುರಿತಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಾರ್ವಜನಿಕರ ಹಣ ಪೋಲು ಮಾಡಿ ತಮ್ಮ ಸರ್ಕಾರದ ಜಾಹೀರಾತುಗಳನ್ನು ನೀಡುತ್ತಿದ್ದಾರೆ. ದೆಹಲಿ ಸರ್ಕಾರ ಸುಪ್ರೀಂಕೋರ್ಟ್ ನ ಆದೇಶ ಉಲ್ಲಂಘಿಸುತ್ತಿದೆ ಎಂದು ಹೇಳಿ ಹೈ ಕೋರ್ಟ್ ನಲ್ಲಿ ಅರ್ಜಿಯೊಂದು ದಾಖಲಾಗಿತ್ತು. ಈ ಕುರಿತಂತೆ ಇಂದು ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ರಾಜಕೀಯ ಪಕ್ಷದ ಜಾಹೀರಾತುಗಳಿಗೆ ನಿಷೇಧ ಹೇರಿರುವ ಸುಪ್ರೀಂಕೋರ್ಟ್ ತನ್ನ ನಿರ್ದೇಶನ ಪಾಲಿಸಲಾಗುತ್ತಿದೆಯೋ, ಇಲ್ಲವೋ ಎಂಬುದನ್ನು ಪರಿಶೀಲಿಸಲು ಯಾವ ರೀತಿಯ ಕ್ರಮಕೈಗೊಂಡಿದೆ. ತನ್ನ ನಿರ್ದೇಶನ ಪಾಲಿಸಲು ಸರ್ಕಾರಿ ಜಾಹೀರಾತುಗಳನ್ನು ಪರಿಶೀಲಿಸಲು ಸುಪ್ರೀಂಕೋರ್ಟ್ ಸಮಿತಿಯೇನಾದರೂ ನೇಮಿಸಿದೆಯೇ ಎಂದು ಕೇಂದ್ರವನ್ನು ಪ್ರಶ್ನಿಸಿದೆ.

ಕೆಲವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಜಾಹೀರಾತುಗಳನ್ನು ಗುರಿಯಾಗಿರಿಸಿಕೊಂಡು ಅರ್ಜಿ ದಾಖಲಿಸಿದ್ದಾರೆ. ಸುಪ್ರೀಂಕೋರ್ಟ್ ಜಾಹೀರಾತು ಕುರಿತಂತೆ ನೀಡಿರುವ ನಿರ್ದೇಶನದ ಕುರಿತಂತೆ ಯಾವ ರೀತಿ ಕ್ರಮಕೈಗೊಂಡಿದೆ ಎಂಬುದರ ಕುರಿತಂತೆ ಮಾಹಿತಿ ತಿಳಿಯಬೇಕಿದ್ದು, ನಂತರವಷ್ಟೇ ಅರವಿಂದ್ ಕೇಜ್ರಿವಾಲ್ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಲಿದೆ ಎಂದು  ಹೈಕೋರ್ಟ್ ಹೇಳಿದ್ದು, ಈ ಕುರಿತ ವಿಚಾರಣೆಯನ್ನು ಜು.27ಕ್ಕೆ ಮುಂದೂಡಿದೆ.

ಪ್ರಜಾಪ್ರಭುತ್ವದಲ್ಲಿ ಸರಕಾರಿ ವೆಚ್ಚದಲ್ಲಿ ಬಿಡುಗಡೆಯಾಗುವ ಜಾಹೀರಾತುಗಳಲ್ಲಿ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿ ಹಾಗೂ ಭಾರತದ ಮುಖ್ಯ ನ್ಯಾಯಮೂರ್ತಿಗಳ ಭಾವಚಿತ್ರ ಮಾತ್ರವಿರಬೇಕು ಎಂದು ಹೇಳಿ ಕಳೆದ ಮೇ ತಿಂಗಳನಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು.

ಆಮ್ ಆದ್ಮಿ ಪಕ್ಷದ ಜಾಹೀರಾತಿನಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮುಖ ಕಾಣಿಸದಿದ್ದರೂ ಬಡವರ ರಕ್ಷಕ ಎನ್ನುವಂತೆ ಅವರನ್ನು ಬಿಂಬಿಸಿದ್ದು, ಇತರ ರಾಜಕೀಯ ಪಕ್ಷಗಳನ್ನು ವಿಲನ್‌ನಂತೆ ತೋರಿಸುವುದು ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ ಎಂದು ಹೇಳಿ ಕಾಂಗ್ರೆಸ್ ನಾಯಕ ಅಜಯ್ ಮಕೇನ್ ಅವರು ಅರ್ಜಿಯೊಂದನ್ನು ದಾಖಲಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com