2 ಎಫ್ಐಆರ್ ದಾಖಲಿಸಿದ ಸಿಬಿಐ

ಯಾಪಂ ಹಗರಣಕ್ಕೆ ಸಂಬಂಧಿಸಿ ತನಿಖೆ ಆರಂಭಿಸಿರುವ ಸಿಬಿಐ ಬುಧವಾರ ಎರಡು ಎಫ್ ಐಆರ್ ದಾಖಲಿಸಿದೆ. ಮಧ್ಯಪ್ರದೇಶದ ಹಿಂದುಳಿದ ವರ್ಗಗಳ ಮತ್ತು ...
ವ್ಯಾಪಂ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ (ಕೃಪೆ: ಪಿಟಿಐ)
ವ್ಯಾಪಂ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ (ಕೃಪೆ: ಪಿಟಿಐ)
Updated on: 

ಭೋಪಾಲ್: ವ್ಯಾಪಂ ಹಗರಣಕ್ಕೆ ಸಂಬಂಧಿಸಿ ತನಿಖೆ ಆರಂಭಿಸಿರುವ ಸಿಬಿಐ ಬುಧವಾರ ಎರಡು ಎಫ್ ಐಆರ್ ದಾಖಲಿಸಿದೆ. ಮಧ್ಯಪ್ರದೇಶದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಆಯೋಗದ ಸಮಿತಿಯ ಸದಸ್ಯ ಹಾಗೂ ಅವರ ಪುತ್ರನ ಹೆಸರೂ ಈ ಎಫ್ಐಆರ್‍ನಲ್ಲಿ ಹೆಸರಿಸಲಾಗಿದೆ. ಈ ಎರಡೂ ಎಫ್ ಐಆರ್‍ಗಳು 2010ರ ವೈದ್ಯಕೀಯ ಪೂರ್ವ ಪರೀಕ್ಷೆ ಹಾಗೂ 2011ರ ಪಿಜಿ ಪೂರ್ವ ಪರೀಕ್ಷೆಗಳಿಗೆ ಸಂಬಂಧಿಸಿದವಾಗಿವೆ. 2010ರ ಪರೀಕ್ಷೆಗೆ ಸಂಬಂಧಿಸಿ ಎಫ್ಐಆರ್‍ನಲ್ಲಿ ಸಿಬಿಐ ಒಟ್ಟು 21 ಅಭ್ಯರ್ಥಿಗಳ ಹೆಸರು ದಾಖಲಿಸಿದೆ. ಎರಡನೇ ಎಫ್ಐಆರ್‍ನಲ್ಲಿ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಆಯೋಗದ ಸದಸ್ಯ ಗುಲಾಬ್ ಸಿಂಗ್ ಕಿರಾರ್, ಪುತ್ರ ಶಕ್ತಿ ಸಿಂಗ್ ಕಿರಾರ್, ವ್ಯಾಪಂ ಮಾಜಿ ಪರೀಕ್ಷೆ ಮೇಲ್ವಿಚಾರಕರು, ಸುಧೀರ್ ಭಡೌರಿಯಾ ಮತ್ತು ಪಂಕಜ್ ತ್ರಿವೇದಿ ಮತ್ತಿತರರ ಹೆಸರುಗಳಿವೆ. ವ್ಯಾಪಂ ಹಗರಣಕ್ಕೆ ಸಂಬಂಧಿಸಿ 40 ಮಂದಿಯ ತಂಡವನ್ನು ರಚಿಸಿರುವ  ಸಿಬಿಐ,ಸೋಮವಾರವಷ್ಟೇ ಮಧ್ಯಪ್ರದೇಶದ ಎಸ್‍ಟಿಎಫ್ ನಿಂದ ತನಿಖೆಯನ್ನು ವಹಿಸಿಕೊಂಡಿತ್ತು.

ಚೌಹಾಣ್ ರಾಜಿನಾಮೆಗೆ ಆಗ್ರಹಿಸಿ ಇಂದು ಬಂದ್
ವ್ಯಾಪಂ ಹಗರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರಾಜಿನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಗುರುವಾರ ಮಧ್ಯಪ್ರದೇಶ ಬಂದ್‍ಗೆ ಕರೆ ನೀಡಿದೆ. ರಂಜಾನ್ ಹಬ್ಬದ ದಿನದಂದೇ ಕರೆನೀಡಿರುವ ಈ ಬಂದ್‍ಗೆ ಕೆಲವು ಮುಸ್ಲಿಂ ಮುಖಂಡರಿಂದ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಇದು ಒತ್ತಾಯಪೂರ್ವಕ ಬಂದ್ ಅಲ್ಲ. ಇಷ್ಟವಿದ್ದವರು ಪಾಲ್ಗೊಳ್ಳಬಹುದು ಎಂದು ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com