

ಭೋಪಾಲ್/ಲಖನೌ: ಉತ್ತರ ಪ್ರದೇಶದಲ್ಲೂ ವ್ಯಾಪಂ ಮಾದರಿ ಹಗರಣ ಸ್ಫೋಗೊಳ್ಳುವ ಸಾಧ್ಯತೆ ಇದೆ.
ಉತ್ತರಪ್ರದೇಶ ಲೋಕಸೇವಾ ಆಯೋಗ ನಡೆಸಿದ ಉಪ ವಿಭಾಗೀಯ ದಂಡಾಧಿಕಾರಿಗಳ ನೇಮಕದಲ್ಲಿ ಭಾರಿ ಪ್ರಮಾಣದ ಅವ್ಯವಹಾರ, ಸ್ವಜನಪಕ್ಷಪಾತ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. 2011ರ ನಂತರ ಯುಪಿಎಸ್ಸಿ ಅಧ್ಯಕ್ಷ ಅನಿಲ್ ಯಾದವ್ ಅವಧಿಯಲ್ಲಿ ನಡೆದಿರುವ ಎಲ್ಲಾ ನೇಮಕಾತಿಗಳಲ್ಲಿ ಅವರದೇ ಜಾತಿಗೆ ಸೇರಿದವರಿಗೆ ನಿಯಮ ಮೀರಿ ಶೇ. 50ಕ್ಕಿಂತ ಅಧಿಕ ಹುದ್ದೆಗಳನ್ನು ನೀಡಲಾಗಿದೆ.
ಕಳೆದ ಮೂರು ಪರೀಕ್ಷೆ ಗಳಲ್ಲಿ ಆಯ್ಕೆಯಾಗಿರುವ ಒಟ್ಟು 86 ಮಂದಿ ಉಪವಿಭಾಗೀಯ ದಂಡಾಧಿಕಾರಿಗಳ ಪೈಕಿ 56 ಮಂದಿ ಯಾದವ್ ಅವರ ಸ್ವಜಾತಿಯವರು ಎಂದು ಆರೋಪಿಸಿರುವ ಹುದ್ದೆವಂಚಿತ ಕೆಲವರು, ಈ ಸಂಬಂಧ ಸಿಬಿಐ ತನಿಖೆಗೆ ಆಗ್ರಹಿಸಿ ಅಲಹಾಬಾದ್ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದ್ದಾರೆ.