ಸಲ್ಮಾನ್ ಖಾನ್ ಭೇಟಿಗೆ ಅಕ್ರಮವಾಗಿ ಭಾರತಕ್ಕೆ ಬಂದ ಪಾಕ್ ಮಹಿಳೆ ಬಂಧನ

ಬಾಲಿವುಡ್ ನಟ ಸಲ್ಮಾನ್ ಖಾನ್ ನನ್ನು ಭೇಟಿ ಮಾಡಲು ಪಾಕಿಸ್ತಾನದಿಂದ ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಮಹಿಳೆಯನ್ನು ಬಂಧಿಸಲಾಗಿದೆ.
ಪಾಕ್ ನಿಂದ ಬಂದ ಮಹಿಳೆ
ಪಾಕ್ ನಿಂದ ಬಂದ ಮಹಿಳೆ
Updated on

ಜಲಂಧರ್: ಬಾಲಿವುಡ್ ನಟ ಸಲ್ಮಾನ್ ಖಾನ್ ನನ್ನು ಭೇಟಿ ಮಾಡಲು ಪಾಕಿಸ್ತಾನದಿಂದ ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಮಹಿಳೆಯನ್ನು ಬಂಧಿಸಲಾಗಿದೆ.

ಪಾಕಿಸ್ತಾನಿ ಮಹಿಳೆ ಸೂಕ್ತ ಪ್ರವಾಸೀ ದಾಖಲೆಗಳಿಲ್ಲದೇ ಅಟ್ಟಾರಿ ಗಡಿಯಿಂದ ಅಕ್ರಮವಾಗಿ ಭಾರತ ಪ್ರವೇಶಿಸಿದ್ದರು. ಸಲ್ಮಾನ್ ಖಾನ್ ನನ್ನು ಭೇಟಿ ಮಾಡುವ ಸಲುವಾಗಿ ಅಕ್ರಮವಾಗಿ ಭಾರತ ಪ್ರವೇಶಿಸಿದ್ದ 27 ವರ್ಷದ ಮಹಿಳೆಯನ್ನು ಚಂದಾ ಖಾನ್ ಎಂದು ಗುರುತಿಸಲಾಗಿದೆ.  ತನ್ನ ಮಗನಿಗೆ ಆರೋಗ್ಯ ಸರಿ ಇಲ್ಲದ ಕಾರಣ ದೆಹಲಿಯ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಲು ಭಾರತಕ್ಕೆ ಬಂದಿದ್ದರು ಎಂದು ಹೇಳಲಾಗಿದೆ.

ಬಜರಂಗಿ ಭಾಯಿಜಾನ್ ಸಿನಿಮಾದ ನಾಯಕ ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡುವ ಉದ್ದೇಶವೂ ಇತ್ತು ಎಂದು ಪಾಕಿಸ್ತಾನದ ಕರಾಚಿಯಿಂದ ಬಂದಿರುವ ಚಂದಾ ಖಾನ್ ಹೇಳಿದ್ದಾರೆ. ಈಕೆಯ ಪತಿಯ ಹೆಸರೂ ಸಲ್ಮಾನ್ ಖಾನ್ ಆಗಿದೆ. ಬಜರಂಗಿ ಭಾಯಿಜಾನ್ ಸಿನಿಮಾ ಪಾಕಿಸ್ತಾನದಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿದೆ.
ಬಂಧನದ ಬಗ್ಗೆ ಮಾಹಿತಿ ನೀಡಿರುವ ಸರ್ಕಾರಿ ರೈಲ್ವೆ  ಪೊಲೀಸ್ ಎ.ಎಸ್.ಪಿ ಮಖಾನ್ ಸಿಂಗ್, ಅಟ್ಟಾರಿ- ದೆಹಲಿ ನಡುವೆ ಸಂಚರಿಸುವ ರೈಲಿನಲ್ಲಿ ಪಾಸ್ ಪೋರ್ಟ್, ವೀಸಾ ಇಲ್ಲದೇ ಸಂಚರಿಸುತ್ತಿದ್ದ ಪಾಕಿಸ್ತಾನಿ ಮಹಿಳೆಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com