

ಅಹಮದಾಬಾದ್: ಸುಪ್ರೀಂಕೋರ್ಟ್ ನಿರ್ದೇಶನದಂತೆ, ಅಹಮದಾಬಾದ್‍ನ ವೈದ್ಯ ತಂಡವೊಂದು ಅತ್ಯಾಚಾರಕ್ಕೆ ಒಳಗಾಗಿ ಗರ್ಭಿಣಿಯಾಗಿದ್ದ 14 ವರ್ಷ ವಯಸ್ಸಿನ ಬಾಲಕಿಗೆ ಗರ್ಭಪಾತ ಮಾಡಲು ಒಪ್ಪಿಗೆ ನೀಡಿದೆ.
ಕಾನೂನಿನ ಪ್ರಕಾರ ಗರ್ಭ ಕಟ್ಟಿ 20 ವಾರಗಳ ಒಳಗಿದ್ದರೆ ಮಾತ್ರ ಗರ್ಭಪಾತಕ್ಕೆ ಅವಕಾಶವಿದೆ. ಆದರೆ ಸುಪ್ರೀಂನ ವಿಶೇಷ ಆದೇಶ ಅನುಸರಿಸಿರುವ ವೈದ್ಯ ತಂಡ ಈ ನಿರ್ಧಾರ ಕೈಗೊಂಡಿದೆ. ಸೆಷನ್ಸ್ ಕೋರ್ಟ್ ಮತ್ತು ಹೈಕೋರ್ಟ್ ಈ ಅತ್ಯಾಚಾರ ಸಂತ್ರಸ್ತ ಬಾಲಕಿಗೆ ಗರ್ಭಪಾತ ಮಾಡಿಸಲು ಸಮ್ಮತಿ ನೀಡದಿದ್ದಾಗ, ಪ್ರಕರಣ ಸುಪ್ರೀಂ ಮೆಟ್ಟಿಲೇರಿತ್ತು. ಶುಕ್ರವಾರ
ಗರ್ಭಪಾತ ನಡೆಯುವ ಸಾಧ್ಯತೆಯಿದೆ.
ಕಳೆದ ವರ್ಷ ಟೈಫಾಯಿಡ್‍ಗೆ ತುತ್ತಾಗಿ ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋಗಿದ್ದ ಬಾಲಕಿ ಮೇಲೆ ಅಲ್ಲಿನ ವೈದ್ಯ ಜತಿನ್ ಮೆಹ್ತಾ ಅತ್ಯಾಚಾರ ಎಸಗಿದ್ದರೆಂದು ಆರೋಪ ದಾಖಲಾಗಿತ್ತು.