ಸಿಇಟಿ ದಾಖಲೆಗಳ ಪರಿಶೀಲನೆ 5ರಿಂದ

ಸಿಇಟಿ ದಾಖಲಾತಿಗಳ ಪರಿಶೀಲನೆ ಕಾರ್ಯ ಜೂ.5ರಿಂದ ರಾಜ್ಯದ 13 ಕೇಂದ್ರಗಳಲ್ಲಿ ಪ್ರಾರಂಭವಾಗಲಿದೆ. ಈ ಬಗ್ಗೆ ವಿವರವಾದ...
ವಿದ್ಯಾರ್ಥಿಗಳು
ವಿದ್ಯಾರ್ಥಿಗಳು
Updated on: 

ಬೆಂಗಳೂರು:ಸಿಇಟಿ ದಾಖಲಾತಿಗಳ ಪರಿಶೀಲನೆ ಕಾರ್ಯ ಜೂ.5ರಿಂದ ರಾಜ್ಯದ 13 ಕೇಂದ್ರಗಳಲ್ಲಿ ಪ್ರಾರಂಭವಾಗಲಿದೆ. ಈ ಬಗ್ಗೆ ವಿವರವಾದ ವೇಳಾಪಟ್ಟಿಯನ್ನು ಪ್ರಾಧಿಕಾರದ
ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ. ಬೆಂಗಳೂರು, ದಾವಣಗೆರೆ, ಬಳ್ಳಾರಿ, ರಾಯಚೂರು, ಕಲಬುರಗಿ, ವಿಜಯಪುರ, ಬೆಳಗಾವಿ, ಧಾರವಾಡ, ಕಾರವಾರ, ಮಂಗಳೂರು, ಶಿವಮೊಗ್ಗ, ಹಾಸನ ಮತ್ತು ಮೈಸೂರಿನಲ್ಲಿ ಪ್ರಾಧಿಕಾರದ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ
ಎಂದು ಕರ್ನಾಟಕ ಪ್ರವೇಶ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
7 ವಿವಿಧ ವಿಷಯಗಳಲ್ಲಿ ಅರ್ಹತಾ ಪಟ್ಟಿಯನ್ನು ಸಿದ್ಧಪಡಿಸಿದ ನಂತರ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸುಗಳಿಗೆ 19,275 ಅಭ್ಯರ್ಥಿಗಳು, ಭಾರತೀಯ ವೈದ್ಯ ಪದಟಛಿತಿ ಹಾಗೂ ಹೋಮಿಯೋಪತಿ ಕೋರ್ಸ್‍ಗೆ 85,407, ಎಂಜಿನಿಯರಿಂಗ್ ಕೋರ್ಸ್‍ಗೆ 1,12,423,
ಆರ್ಕಿಟೆಕ್ಚರ್ ಕೋರ್ಸ್‍ಗೆ 1394 ಅಭ್ಯರ್ಥಿಗಳಿಗೆ ರ್ಯಾಂಕ್ ನೀಡಲಾಗಿದೆ. ಕೃಷಿ ಕೋರ್ಸ್‍ಗೆ 82,161 ಅಭ್ಯರ್ಥಿಗಳು, 85,577 ಪಶುಸಂಗೋಪನೆ ಹಾಗೂ 1,16,133
ಅಭ್ಯರ್ಥಿಗಳು ಬಿ.ಫಾರ್ಮಾ ಮತ್ತು ಫಾರ್ಮ್-ಡಿ ಕೋಸ್ರ್ ಗೆ ಅರ್ಹತೆ ಪಡೆದಿದ್ದಾರೆ. ಎಲ್ಲಾ ವಿದ್ಯಾರ್ಥಿಗಳ ಎಲ್ಲಾ ವಿಷಯಗಳ ಸ್ಕ್ಯಾನ್ ಮಾಡಿದ ಓಎಂಆರ್ ಉತ್ತರ ಪತ್ರಿಕೆ ಪ್ರತಿಯನ್ನು ಪ್ರಾ„ಕಾರದ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳು ಇದನ್ನು ಡೌನ್‍ಲೋಡ್ ಮಾಡಿಕೊಳ್ಳಲು ಅವಕಾಶವಿದೆ.

 ಗೊಂದಲವಿದ್ದರೆ ತಿಳಿಸಿ
ಅಭ್ಯರ್ಥಿಗಳು ದಾಖಲಾತಿ ಪರಿಶೀಲನೆಗೆ ಬರುವ ಮುನ್ನ ಸಿಇಟಿ ಫಲಿತಾಂಶ ಪಟ್ಟಿಯಲ್ಲಿ ಸಿಇಟಿ ನಂಬರ್ ಮುಂದೆ ಪ್ರಕಟಿಸಿರುವ ಅರ್ಹತಾ ಪರೀಕ್ಷೆಯ ಅಂಕಗಳನ್ನು
ಪರಿಶೀಲಿಸಿಕೊಂಡು ಏನಾದರೂ ವ್ಯತ್ಯಾಸಗಳಿದ್ದರೆ ಇ- ಮೇಲ್ ಮೂಲಕ ಪ್ರಾ„ಕಾರದ ಗಮನಕ್ಕೆ ತರಲು ಕೋರಲಾಗಿದೆ. ರ್ಯಾಂಕ್ ತಡೆ ಹಿಡಿಯಲ್ಪಟ್ಟಿರುವ ಅಭ್ಯರ್ಥಿಗಳು ತಮ್ಮ ಅರ್ಹತಾ ಪರೀಕ್ಷೆಯ ಅಂಕಪಟ್ಟಿಯಯಥಾ ಪ್ರತಿಯನ್ನು ಕೆಇಎ ಕಚೇರಿಗೆ ಇ-ಮೇಲ್, ಫ್ಯಾಕ್ಸ್
ಮೂಲಕ ಅಥವಾ ಖುದ್ದಾಗಿ ಸಲ್ಲಿಸಿ ರ್ಯಾಂಕ್‍ಗಳನ್ನು ಪಡೆಯಬಹುದು.
ರ್ಯಾಂಕ್ ನೀಡಿದ ಮಾತ್ರಕ್ಕೆ ಅಭ್ಯರ್ಥಿಗಳಿಗೆ ಸೀಟು ಹಂಚಿಕೆ ಮಾಡಿಕೊಳ್ಳುವ ಅರ್ಹತೆ ಬರುವುದಿಲ್ಲ. ದಾಖಲಾತಿ ಪರಿಶೀಲನೆ ನಂತರ ಮಾತ್ರವೇ ಅರ್ಹತೆ ದಾಖಲಾತಿ
ಪರಿಶೀಲನೆ ನಂತರ ಮಾತ್ರವೇ ಅರ್ಹತೆ ಪರಿಗಣಿಸಲಾಗುವುದು ಎಂದು ಪ್ರಾಧಿಕಾರ ತಿಳಿಸಿದೆ.

 ಸ್ಪಾಟ್ ರ್ಯಾಂಕ್ ಲಭ್ಯ
ಅರ್ಹ ಅಭ್ಯರ್ಥಿಗೆ ರ್ಯಾಂಕ್ ನೀಡದೇ ಇದ್ದ ಪಕ್ಷದಲ್ಲಿ ಅಭ್ಯರ್ಥಿಯು ತನ್ನ ಫೋಟೋ ಪ್ರತಿಯನ್ನು ಪ್ರಾಧಿಕಾರದ ಇ-ಮೇಲ್ ವಿಳಾಸಕ್ಕೆ ಕಳುಹಿಸಿ ರ್ಯಾಂಕ್ ಪಡೆಯಬಹುದು
ಎಂದು ಕೆಇಎ ತಿಳಿಸಿದೆ.
ಹಾಗೆಯೇ ದ್ವಿತೀಯ ಪಿಯುಸಿ ಮರು ಮೌಲ್ಯಮಾಪನದ ಅಂಕಗಳಲ್ಲಿ ವ್ಯತ್ಯಾಸವಾದಲ್ಲಿ ಆ ಅಂಕಗಳ ಆಧಾರದ ಮೇರೆಗೆ ಅಭ್ಯರ್ಥಿಗಳಿಗೆ ಹೊಸ ರ್ಯಾಂಕ್ ನೀಡಲಾ ಗುವುದು.
ಪಪೂ ಶಿಕ್ಷಣ ಇಲಾಖೆಯು ಮರುಮೌಲ್ಯಮಾಪನದ ವಿವರಗಳನ್ನು ನೇರವಾಗಿ ಪರೀಕ್ಷಾ ಪ್ರಾಧಿಕಾರಕ್ಕೆ ಸಲ್ಲಿಸಲಿದೆ.
ಹಿಂದಿನ ಸಿಇಟಿ ಪರೀಕ್ಷೆಗಳಲ್ಲಿ ಸಿಇಟಿ ಫಲಿತಾಂಶ ಘೋಷಣೆಯ ನಂತರವೂ ದೊಡ್ಡ ಪ್ರಮಾಣದಲ್ಲಿ ಸ್ಪಾಟ್ ರ್ಯಾಂಕ್ ನೀಡಲಾಗಿದೆ. 2013ರ ಸಿಇಟಿಯಲ್ಲಿ 5401 ಮಂದಿ ಸ್ಪಾಟ್ ರ್ಯಾಂಕ್ ಪಡೆದುಕೊಂಡಿದ್ದರೆ, 2014ನೇ ಸಾಲಿನ ಸಿಇಟಿಯಲ್ಲಿ 6499 ಮಂದಿ ಸ್ಪಾಟ್ ರ್ಯಾಂಕ್ ಪಡೆದುಕೊಂಡಿದ್ದರು. ಹೀಗಾಗಿ ಸ್ಪಾಟ್ ರ್ಯಾಂಕ್ ವಿಚಾರದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಯಾವುದೇ ಗೊಂದಲ ಬೇಡ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.


ನಾನು ಯಾವುದೇ ಕೋಚಿಂಗ್ ತೆಗೆದುಕೊಳ್ಳಲಿಲ್ಲ. ಪರೀಕ್ಷೆಯನ್ನೇ ಧನಾತ್ಮಕವಾಗಿ ತೆಗೆದುಕೊಂಡೆ. ಈ ಫಲಿತಾಂಶ ಮಾತ್ರ ನನಗೆ ಆಶ್ಚರ್ಯ ತಂದಿದೆ.
- ಅಪರ್ಣ ವಾರಿಯರ್,
ನ್ಯಾಷನಲ್ ಪಬ್ಲಿಕ್ ಸ್ಕೂಲ್, ಬೆಂಗಳೂರು
(ಆರ್ಕಿಟೆಕ್ಚರ್ ಎರಡನೇ ರ್ಯಾಂಕ್)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com