ಶೀಘ್ರವೇ ಬರಲಿದೆ ಸೌರಚಾಲಿತ ರೈಲು

ಸೌರಶಕ್ತಿಯ ಮೂಲಕ ರೈಲುಗಳನ್ನು ಓಡಿಸುವ ಭಾರತೀಯ ರೈಲ್ವೆಯ ಮಹತ್ವಾಕಾಂಕ್ಷಿ ಯೋಜನೆ ಇನ್ನೇನು ಕೆಲವೇ ತಿಂಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ...
ಭಾರತೀಯ ರೈಲ್ವೇ
ಭಾರತೀಯ ರೈಲ್ವೇ
Updated on: 

ನವದೆಹಲಿ: ಸೌರಚಾಲಿತ ರೈಲಿನ ಕನಸು ನನಸಾಗುವ ಸಮಯ ಬಂದಿದೆ. ಸೌರಶಕ್ತಿಯ ಮೂಲಕ ರೈಲುಗಳನ್ನು ಓಡಿಸುವ ಭಾರತೀಯ ರೈಲ್ವೆಯ ಮಹತ್ವಾಕಾಂಕ್ಷಿ ಯೋಜನೆ ಇನ್ನೇನು ಕೆಲವೇ ತಿಂಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ.

ಸೌರ ವಿದ್ಯುತ್ ಚಾಲಿತ ಬೋಗಿಯ ಮಾದರಿಯನ್ನು ಈಗಾಗಲೇ ಪ್ರಯೋಗಕ್ಕೆ ಒಳಪಡಿಸಲಾಗಿದೆ. ಶೀಘ್ರದಲ್ಲೇ ಇಡೀ ರೈಲಿಗೆ ಸೌರ ಫಲಕಗಳನ್ನು ಅಳವಡಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಯೋಗ ಯಶಸ್ಸು
ಸೌರಶಕ್ತಿಯು ಡೀಸೆಲ್ ಬಳಕೆಯ ಪ್ರಮಾಣವನ್ನು ತಗ್ಗಿಸುವುದಷ್ಟೇ ಅಲ್ಲ, ಹೆಚ್ಚು ಲಾಭದಾಯಕ ಕ್ರಮವೂ ಹೌದು. ಸೌರಶಕ್ತಿ ಚಾಲಿತ ಬೋಗಿಗಳು ಸದ್ಯಕ್ಕೆ 17 ಯುನಿಟ್‍ನಷ್ಟು ವಿದ್ಯುತ್ ಉತ್ಪತ್ತಿ ಮಾಡುತ್ತಿವೆ. `ಪ್ರಾಯೋಗಿಕ ಯೋಜನೆಯಲ್ಲಿ, ಮೊದಲು ಒಂದು ನಾನ್-ಎಸಿ ಬೋಗಿಯ ಚಾವಣಿಯಲ್ಲಿ ಸೌರಫಲಕ ಅಳವಡಿಸಲಾಗಿದೆ. ಪ್ರತಿ ದಿನ ಇದರಲ್ಲಿ 17 ಯುನಿಟ್ ವಿದ್ಯುತ್ ಉತ್ಪತ್ತಿಯಾಗಿದ್ದು, ಪ್ರಯೋಗ ಗ ಯಶಸ್ವಿಯಾಗಿದೆ. ಹೀಗಾಗಿ ಇಡೀ ರೈಲನ್ನೇ ಸೌರ ವಿದ್ಯುತ್ ಚಾಲಿತವನ್ನಾಗಿಸುವ ನಿರ್ಧಾರವನ್ನು ಆದಷ್ಟು ಬೇಗೆ ಕೈಗೊಳ್ಳಲಿದ್ದೇವೆ'' ಎಂದು ವಿಭಾಗೀಯ ರೈಲ್ವೆ ಮ್ಯಾನೇಜರ್ ಅರುಣ್ ಅರೋರಾ ತಿಳಿಸಿದ್ದಾರೆ.

ಸೌರಶಕ್ತಿ ಬಳಕೆಯಿಂದ ರೈಲ್ವೆಯು ಒಂದು ಕೋಚ್‍ಗೆ ಪ್ರತಿ ವರ್ಷದಲ್ಲಿ ರು.1.24 ಲಕ್ಷ ಉಳಿತಾಯ ಮಾಡಬಹುದು. ಇಂತಹ ರೈಲುಗಳು ವರ್ಷಕ್ಕೆ 90 ಸಾವಿರ ಲೀ. ಡೀಸೆಲ್ ಬಳಕೆ ತಗ್ಗಿಸುತ್ತದೆ ಮತ್ತು 200 ಟನ್‍ಗಳಷ್ಟು ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆ ಕಡಿಮೆ ಮಾಡುತ್ತದೆ. ಈ ಮೂಲಕ ಪರಿಸರ ಮಾಲಿನ್ಯ ತಗ್ಗಿಸಬಹುದು ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಉಳಿತಾಯ-ಆದಾಯ

17 ಯುನಿಟ್- ಸೌರಫಲಕವು ದಿನಕ್ಕೆ ಉತ್ಪಾದಿಸುವ ವಿದ್ಯುತ್
ರು.340- ಒಂದು ಬೋಗಿಯಲ್ಲಿ ದಿನಕ್ಕಾಗುವ ಉಳಿತಾಯ
ರು.1,24,100- ಒಂದು ಬೋಗಿಯಲ್ಲಿ ವರ್ಷಕ್ಕಾಗುವ ಉಳಿತಾಯ
ರು.3.90 ಲಕ್ಷ- ಒಂದು ಬೋಗಿಯಲ್ಲಿ ಸೌರಫಲಕ ಅಳವಡಿಸಲು ತಗಲುವ ವೆಚ್ಚ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com