ಐಸಿಸ್ ಸೇರಲು ಸಹಾಯ ಮಾಡುತ್ತಿದ್ದ ಮೆಹ್ದಿ

ಐಸಿಸ್‍ನ ಸ್ವಯಂಘೋಷಿತಪ್ರತಿನಿಧಿ ಮೆಹ್ದಿ ಮಸ್ರೂರ್ ಬಿಸ್ವಾಸ್,ಹಿಂಬಾಲಕರಿಗೆ ಟರ್ಕಿ ಮತ್ತು ಸಿರಿಯಾ ಮತ್ತು ಇಸಿಸ್ ನಡುವಿನ ಗಡಿಯನ್ನು ದಾಟಿ ಜಿಹಾದಿ...
ಮೆಹ್ದಿ ಮಸ್ರೂರ್ ಬಿಸ್ವಾಸ್
ಮೆಹ್ದಿ ಮಸ್ರೂರ್ ಬಿಸ್ವಾಸ್

ನವದೆಹಲಿ: ಐಸಿಸ್‍ನ ಸ್ವಯಂಘೋಷಿತ ಪ್ರತಿನಿಧಿ ಮೆಹ್ದಿ ಮಸ್ರೂರ್  ಬಿಸ್ವಾಸ್,ಹಿಂಬಾಲಕರಿಗೆ ಟರ್ಕಿ ಮತ್ತು ಸಿರಿಯಾ ಮತ್ತು ಇಸಿಸ್ ನಡುವಿನ ಗಡಿಯನ್ನು ದಾಟಿ ಜಿಹಾದಿ ಚಳವಳಿ ಸೇರಲು ಸಹಾಯ ಮಾಡುತ್ತಿದ್ದರು.ಬಿಸ್ವಾಸ್, ಐಸಿಸ್‍ನ ಬೆಳವಣಿಗೆಗಳನ್ನುಇಂಟರ್‍ನೆಟ್ ಹಾಗೂ ಟಿವಿಯ ಮೂಲಕ ವೀಕ್ಷಿಸಿ, ಹಿಂಬಾಲಕರಿಗೆ ಮಾಹಿತಿ ನೀಡುತ್ತಿದ್ದ. ಐಸಿಸ್ ಗಡಿ ದಾಟಲು ಇಚ್ಛಿಸುವವರಿಗೆ `ಃಶಮಿವಿಟ್‍ನೆಸ್' ಎಂಬ ಟ್ವಿಟರ್ ಖಾತೆಯಿಂದ ಮಾರ್ಗದರ್ಶನ ನೀಡುತ್ತಿದ್ದ ಎಂದು ಸ್ಥಳೀಯ ಕೋರ್ಟ್‍ನಲ್ಲಿ ಬೆಂಗಳೂರು ಪೊಲೀಸರು ಸಲ್ಲಿಸಿರುವ ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಿಲಾಗಿದೆ. ``ಃತಲಾಬ್‍ಅಲ್‍ಹಕ್, ವಲಕುಮ್ ಸಲಾಂ, ಟೆಲ್ ಅಬ್ಯಾದ್ ಕ್ರಾಸಿಂಗ್(ಗಡಿ ಪ್ರದೇಶ) ಈಗ ತೆರೆದಿದೆ'' ಎಂದು ಕಳೆದ ವರ್ಷ ಜೂ.30 ಆತ ತನ್ನ ಹಿಂಬಾಲಕ ತಲಾಬ್ ಅಲ್ ಹಕ್ ಎಂಬಾತನಿಗೆ ಟ್ವೀಟ್ ಮಾಡಿದ್ದ. ಅದೇ ದಿನ ಐಸಿಸ್ ಉಗ್ರರು ಸಿರಿಯಾದ ಪಟ್ಟಣ ಟೆಲ್ ಅಬ್ಯಾದ್‍ನ್ನು ಆಕ್ರಮಿಸಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com