

ಇಂಫಾಲ: ಮಣಿಪುರದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 20 ಸೈನಿಕರು ಸಾವನ್ನಪ್ಪಿ, ಹಲವು ಮಂದಿ ಗಾಯಗೊಂಡ ಪ್ರಕರಣದ ಹೊಣೆಯನ್ನು ಮೂರು ಸಂಘಟನೆಗಳು ಹೊತ್ತಿಕೊಂಡಿವೆ. ಎನ್ ಎಸ್ ಸಿ ಎನ್, ಕಾಂಗ್ಲೈ ಯಾವುಲ್ ಕನ್ನ ಲುಪ್, ಹಾಗೂ ಕಾಂಗ್ಲೇಪಕ್ ಕಮ್ಯೂನಿಸ್ಟ್ ಪಾರ್ಟಿ ಎಂಬ ಭಯೋತ್ಪಾದಕ ಸಂಘಟನೆಗಳು ದಾಳಿಯ ಹೊಣೆ ತಮ್ಮದೆಂದು ಹೇಳಿವೆ.
ಸೇನಾ ಮುಖ್ಯಸ್ಥ ದಲಬೀರ್ ಸಿಂಗ್ ಸುಹಾಗ್ ಇಂಪಾಲಗೆ ಭೇಟಿ ನೀಡಿದ್ದು, ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ಮೃತ ಯೋಧರಿಗೆ ಗೌರವ ಸಲ್ಲಿಸಿದ ದಲಬೀರ್ ಸಿಂಗ್ ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ನಿನ್ನೆ 6 ಡೋಗ್ರಾ ರೆಜಿಮೆಂಟ್ ಸೈನಿಕರು ಗಸ್ತು ತಿರುಗುತ್ತಿದ್ದ ವೇಳೆ ಅವಿತು ಕುಳಿತಿದ್ದು ಭಯೋತ್ಪಾಕರು ಏಕಾ ಏಕಿ ದಾಳಿ ನಡೆಸಿ 20 ಮಂದಿಯನನ್ನು ಕೊಂದಿದ್ದರು.