

ನೋಯ್ಡಾ: ವಿಶ್ವದ ಅತಿದೊಡ್ಡ ಗಣಿತ ಪ್ರಶ್ನೆಯ ಚಾಂಪಿಯನ್‍ಷಿಪ್‍ನಲ್ಲಿ ಗೆಲವು ಸಾಧಿಸುವ ಮೂಲಕ ನಾಲ್ವರು ಭಾರತೀಯ ವಿದ್ಯಾರ್ಥಿಗಳು ದೇಶಕ್ಕೆ ಹೆಮ್ಮೆ ತಂದುಕೊಟ್ಟಿದ್ದಾರೆ.
ನೋಯ್ಡಾದ ಗೌರವ್ ಪಾಂಡೆ ಕೆನ್‍ಕೆನ್ ಇಂಟರ್ ನ್ಯಾಷನಲ್ ಚಾಂಪಿಯನ್ ಆಗುವ ಮೂಲಕ ಇಮ್ಮಡಿ ಖುಷಿ ನೀಡಿದ್ದಾನೆ.
ಕೆನ್‍ಕೆನ್ ಎನ್ನುವುದು ಗ್ರಿಡ್ ಆಧಾರಿತ ಸಂಖ್ಯಾ ಸಮಸ್ಯೆಯಾಗಿದ್ದು, ಅಭ್ಯರ್ಥಿಯ ಲಾಜಿಕ್, ಲೆಕ್ಕ ಬಿಡಿಸುವ ಕೌಶಲ್ಯ ಪರೀಕ್ಷಿಸಲಾಗುತ್ತದೆ.