ಏರ್ ಇಂಡಿಯಾ ವಿಮಾನದ ಊಟದಲ್ಲಿ ಹಲ್ಲಿ ಪತ್ತೆ

ದೆಹಲಿ- ಲಂಡನ್ ಎ111 ಏರ್ ಇಂಡಿಯಾ ವಿಮಾನದ ಊಟದಲ್ಲಿ ಹಲ್ಲಿ ಪತ್ತೆಯಾಗಿದೆ.
ಬರ್ಗರ್ ಕೆಳಗೆಇರುವ  ಹಲ್ಲಿ
ಬರ್ಗರ್ ಕೆಳಗೆಇರುವ ಹಲ್ಲಿ

ಮುಂಬಯಿ: ದೆಹಲಿ- ಲಂಡನ್ ಎ111 ಏರ್ ಇಂಡಿಯಾ ವಿಮಾನದ ಊಟದಲ್ಲಿ ಹಲ್ಲಿ ಪತ್ತೆಯಾಗಿದೆ. ಏರ್ ಇಂಡಿಯ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಸ್ಪೆಷಲ್ ಊಟಕ್ಕಾಗಿ ಆರ್ಡರ್ ಮಾಡಿದ್ದರು. ನಂತರ ಗಗನಸಖಿ ಅವರಿಗೆ ವಿಮಾನದ ಅಡುಗೆ ಕೋಣೆಯಲ್ಲಿ ಇಡಲಾಗಿದ್ದ  ಊಟ ತಂದು ಪ್ರಯಾಣಿಕರಿಗೆ ನೀಡಿದ್ದಾರೆ. ಊಟದ ಟ್ರೇ ಪಡೆದ ಪ್ರಯಾಣಿಕರು ಕೂಡಲೇ ಜೋರಾಗಿ ಕೂಗಿಕೊಂಡಿದ್ದಾರೆ. ಎಲ್ಲರೂ ಗಾಬರಿಯಿಂದ ಎದ್ದು ನೋಟಿದಾಗ ತಟ್ಟೆಯಲ್ಲಿದ್ದ ಬರ್ಗರ್ ಕೆಳಗಡೆ ಹಲ್ಲಿ ಹರಿಡಾದುತ್ತಿದ್ದದ್ದನ್ನು ನೋಡಿ ಪ್ರಯಾಣಿಕರು ಆಕ್ರೋಶ ಗೊಂಡಿದ್ದಾರೆ. ಇದರ ನಂತರ ಹಲವು ಪ್ರಯಾಣಿಕರು ಏರ್ ಇಂಡಿಯಾ ವಿಮಾನದಲ್ಲಿ ಊಟ ತಿನ್ನಲು ನಿರಾಕರಿಸಿದ್ದಾರೆ ಎಂದು ಹೇಳಲಾಗಿದೆ.

ಇನ್ನು ಈ ಸಂಬಂಧ ಏರ್ ಇಂಡಿಯಾ ವಿಮಾನದ ವಿರುದ್ಧ ಪ್ರಯಾಣಿಕರು ದೂರು ದಾಖಲಿಸಿದ್ದಾರೆ, ಆದರೆ ಇದುವರಗೆ ಏರ್ ಇಂಡಿಯಾ ಆಡಳಿತ ವರ್ಗ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ಗಾರೆ.

ಊಟ ಇಡುವ ಕೋಣೆಯಲ್ಲಿ ಸ್ವಚ್ಚತೆ ಇಲ್ಲ. ಇದರ ಬಗ್ಗೆ ಹಲವು ಬಾರಿ ಮ್ಯಾನೇಜ್ ಮೆಂಟ್ ಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿಂದೆಯೂ ಊಟದಲ್ಲಿ ಜಿರಳೆ ಪತ್ತೆಯಾದ ಪ್ರಕರಣ ಕೂಡ ನಡೆದಿದೆ ಎಂದು ವಿಮಾನ ಸಿಬ್ಬಂದಿ ಆರೋಪಿಸಿದ್ದಾರೆ. ವಿಮಾನಗಳಲ್ಲಿ ಈಟ ತಿನ್ನುವುದು ಎಷ್ಟು ಸೂಕ್ತ ಎಂಬುದು ಸದ್ಯದ ಪ್ರಶ್ನೆಯಾಗಿದೆ.




ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com