ಏರ್ ಇಂಡಿಯಾ ವಿಮಾನದಲ್ಲಿ ಕೊನೆಯುಸಿರೆಳೆದ ಪ್ರಯಾಣಿಕ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ನಿವಾಸಿಯೊಬ್ಬರು ಚಿಕಿತ್ಸೆಗಾಗಿ ವಿಮಾನದಲ್ಲಿ ಭಾರತಕ್ಕೆ ಆಗಮಿಸಿದ್ದು, ವಿಧಿವಶಾತ್ ವಿಮಾನದಲ್ಲಿಯೇ ಕೊನೆಯುಸಿರೆಳೆದಿದ್ದಾರೆ...
ಏರ್ ಇಂಡಿಯಾ
ಏರ್ ಇಂಡಿಯಾ
Updated on: 

ಚೆನ್ನೈ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ನಿವಾಸಿಯೊಬ್ಬರು ಚಿಕಿತ್ಸೆಗಾಗಿ ವಿಮಾನದಲ್ಲಿ ಭಾರತಕ್ಕೆ ಆಗಮಿಸಿದ್ದು, ವಿಧಿವಶಾತ್ ವಿಮಾನದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

46 ವರ್ಷ ಪ್ರಾಯದ ವ್ಯಕ್ತಿಯೋರ್ವರು ಕುಟುಂಬದ ಸದಸ್ಯರೊಂದಿಗೆ ಪ್ರಯಾಣಿಸುತ್ತಿದ್ದ ರಾಬರ್ಟ್ ಮೃತಪಟ್ಟವರು. ವಿಮಾನವು ನಿಲ್ದಾಣದಲ್ಲಿ ಇಳಿದು ಸಹ ಪ್ರಯಾಣಿಕರೆಲ್ಲರೂ ಇಳಿದು ಹೋಗುತ್ತಿದ್ದರೂ, ಇವರು ನಿಶ್ಚೇಷ್ಟಿತರಾಗಿದ್ದರು. ಅದನ್ನು ಗಮನಿಸಿದ ಕುಟುಂಬದ ಸದಸ್ಯರು, ವಿಮಾನ ಸಿಬ್ಬಂದಿಗೆ ತಿಳಿಸಿದ್ದಾರೆ. ವಿಮಾನ ನಿಲ್ದಾಣದ ವೈದ್ಯ ತಂಡ ಪರೀಕ್ಷಿಸಿದಾಗ ರಾಬರ್ಟ್ ಮೃತರಾಗಿರುವುದು ತಿಳಿದುಬಂತು.

ರಾಬರ್ಟ್‌ ಸಾವಿನ ಕಾರಣ ಏನೆಂಬುದು ಈಗಿನ್ನು ಮರಣೋತ್ತರ ಪರೀಕ್ಷೆಯ ಬಳಿಕವೇ ಗೊತ್ತಾಗಬೇಕಿದೆ. ಅವರ ಮೃತ ದೇಹವನ್ನು ಮೀನಂಬಾಕ್ಕಂ ಪೊಲೀಸರಿಗೆ ಹಸ್ತಾಂತರಿಸಿದ್ದು ಅವರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com