

ಕುವೈತ್ ಸಿಟಿ: ಶುಕ್ರವಾರ ಕುವೈತ್ ಸಿಟಿಯಲ್ಲಿರುವ ಮಸೀದಿಯೊಂದರಲ್ಲಿ ಆತ್ಮಾಹುತಿ ದಾಳಿ ನಡೆದಿದ್ದು, 13 ಮಂದಿ ಸಾವಿಗೀಡಾಗಿರುವ ಬಗ್ಗೆ ವರದಿಯಾಗಿದೆ. ಈ ದಾಳಿಯಲ್ಲಿ 30 ಜನರಿಗೆ ಗಾಯಗಳಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ.
ಇಲ್ಲಿನ ಇಮಾಮ್ ಸಾದಿಕ್ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ವೇಳೆ ಈ ದಾಳಿ ಸಂಭವಿಸಿದೆ. ಪವಿತ್ರ ರಂಜಾನ್ ಮಾಸಾಚರಣೆಯ ಪ್ರಯುಕ್ತ ಮಸೀದಿಯಲ್ಲಿ ಜನರ ಸಂಖ್ಯೆಯೂ ಜಾಸ್ತಿ ಇತ್ತು.
ಪ್ರಸ್ತುತ ದಾಳಿಯ ಹೊಣೆಯನ್ನು ಇಸಿಸ್ ಒಪ್ಪಿಕೊಂಡಿದೆ.