

ಕುವೈತ್: ಸಿಟಿಯ ಶಿಯಾ ಮಸೀದಿ ಅಲ್ -ಇಮಾಮ್ ಅಲ್ -ಸಾದೇಕ್‍ನಲ್ಲಿ ಶುಕ್ರವಾರದ ನಮಾಜ್ ವೇಳೆ ಉಗ್ರರು ಬಾಂಬ್ ಸ್ಫೋಟಿಸಿದ್ದಾರೆ.
ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಮಸೀದಿಯೊಳಕ್ಕೆ ಬಂದ ಆತ್ಮಾಹುತಿ ಬಾಂಬರೊಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಐಸಿಸ್ ಉಗ್ರರು ಸಾಮಾಜಿಕ ತಾಣದಲ್ಲಿ ದಾಳಿಯ ಹೊಣೆ ಹೊತ್ತುಕೊಂಡಿದ್ದಾರೆ.