

ಇಸ್ಲಾಮಾಬಾದ್: ತ್ರೈವಾರ್ಷಿಕ ಸಾಲ ಯೋಜನೆಯಡಿ ಪಾಕಿಸ್ತಾನಕ್ಕೆ 506 ಮಿಲಿಯನ್ ಡಾಲರ್ ಸಾಲ ನೀಡಲು ಐಎಂಎಫ್ ಒಪ್ಪಿಗೆ ನೀಡಿದೆ.
ವಾಷಿಂಗ್ ಟನ್ ನಲ್ಲಿ ಈ ಅಧಿಕೃತ ಹೇಳಿಕೆಯಲ್ಲಿ ಪಾಕಿಸ್ತಾನಕ್ಕೆ 506 ಮಿಲಿಯನ್ ಡಾಲರ್ ಸಾಲ ನೀಡುವುದಾಗಿ ಅಂತರರಾಷ್ಟ್ರೀಯ ಹಣಕಾಸು ನಿಧಿ ತಿಳಿಸಿದೆ. ವಿಸ್ತೃತ ಫಂಡ್ ಸೌಲಭ್ಯ(ಇ.ಎಫ್.ಎಫ್)ಅಡಿ ಪಾಕಿಸ್ತಾನದ ಆರ್ಥಿಕ ಕಾರ್ಯಕ್ಷಮತೆಯನ್ನು ಪರಿಶೀಲಿಸಿದ ನಂತರ ಐಎಂಎಫ್ ಪಾಕಿಸ್ತಾನಕ್ಕೆ ಸಾಲ ನೀಡಲು ಸಮ್ಮತಿಸಿದೆ.
ಪ್ರಸ್ತುತ ಮಂಜೂರು ಮಾಡಿರುವ ಹಣವನ್ನೂ ಸೇರಿಸಿ, ಐಎಂಎಫ್ ನಿಂದ ಪಾಕಿಸ್ತಾನಕ್ಕೆ ಈವರೆಗೆ ಒಟ್ಟಾರೆ 4 .05 ಬಿಲಿಯನ್ ಡಾಲರ್ ಸಾಲ ನೀಡಲಾಗಿದೆ. ಇದರಿಂದಾಗಿ ಪಾಕಿಸ್ತಾನದ ವಿದೇಶಿ ವಿನಿಮಯ ಮೀಸಲು 18 .7 ಡಾಲರ್ ಗಳಷ್ಟಾಗಲಿದೆ.